ಭದ್ರಾವತಿ: ರಾಜ್ಯ ಬಿಜೆಪಿ ಈಗ ನಾಯಕತ್ವ ಇಲ್ಲದ ಪಕ್ಷವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೇಲಿ ಮಾಡಿದ್ದಾರೆ.
ಭದ್ರಾವತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೋದಿ ಅವರು ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತ ಹೇಳಿದರು.ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದರು ಎಂದು ಹೇಳಿದರು.
ಆಗೆಲ್ಲಾ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಸುತ್ತೇವೆ ಅಂತಿದ್ದರು.ಅನಂತರ ಬಸವರಾಜ ಬೊಮ್ಮಾಯಿ ಅವರನ್ನ ಮುಖ್ಯ ಮಂತ್ರಿ ಮಾಡಿದರು.ಆಗ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಮಾಡ್ತೀವಿ ಅಂದರು ಅಮಿತ್ ಶಾ.
ಇದೀಗ ನರೇಂದ್ರ ಮೋದಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ಹೇಳುತ್ತಿದ್ದಾರೆ.
ಹಾಗಾದರೆ ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಫೇಲ್.ಅದಕ್ಕಾಗಿಯೇ ಮೋದಿ ಮುಂದಿಟ್ಟುಕೊಂಡು ಚುನಾವಣೆ ಅಂತಿದಾರೆ ಎಂದು ಟೀಕಿಸಿದರು ಡಿಕೆಶಿ.
ಅದಕ್ಕೇ ನಾನು ಹೇಳ್ತೀನಿ ನಾಯಕತ್ವ ಇಲ್ಲದ ಬಿಜೆಪಿ ಅಂತ ಒನ್ ಲೈನ್ ಟ್ಯಾಗ್ ಎಂದರು.
ಕಾಂಗ್ರೆಸ್ ನಯಕತ್ವದ ಬಗ್ಗೆ ಮಾಧ್ಯಮ ದವರ ಪ್ರಶ್ನೆಗೆ ಈಗ ಗಾಂಧಿ ಕುಟುಂಬದವರು ಅಧ್ಯಕ್ಷರಾಗಿಲ್ಲ.ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಅಧಿಕಾರಕ್ಕೆ ಬರುವ ಮೊದಲು ಸ್ವಚ್ಛ ,ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಬಿಜೆಪಿ ಯವರು ಹೇಳಿದರು.
ಆದರೆ ಬರೀ ಭ್ರಷ್ಟಾಚಾರ ತುಂಬಿದೆ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನೇ ಹೇಳಿಲ್ವ ಇವರ ಭ್ರಷ್ಟಾಚಾರದ ಬಗ್ಗೆ ಎಂದು ಮಾರ್ಮಿಕವಾಗಿ ನುಡಿದರು.
ಭ್ರಷ್ಟಾಚಾರ ಆಗಿಲ್ಲದಿದ್ದರೆ ಐಪಿಎಸ್ ಅಧಿಕಾರೀನ ಯಾಕೆ ಒಳಗೆ ಕಳಿಸಿದರು,ಎಸ್ ಐ ಪರೀಕ್ಷೆಯಲ್ಲಿ ಕಾಪಿ ಮಾಡಿದರು ಅಂತ ಎಷ್ಟೋ ಜನರನ್ನ ಒಳಗೆ ಹಾಕಿಲ್ವಾ ಇದೆಲ್ಲಾ ಏನು ಭ್ರಷ್ಟಾಚಾರ ಅಲ್ವಾ ಎಂದು ಡಿ.ಕೆ.ಶಿವಕುಮಾರ್ ಕಾರವಾಗಿ ಪ್ರಶ್ನಿಸಿದರು.

