ರಾಮಕೃಷ್ಣನಗರ ಬಡಾವಣೆ ಆಧ್ಯಾತ್ಮಿಕತೆಗೆ ಹೆಸರುವಾಸಿ -ಯಶಸ್ವಿ

ಮೈಸೂರು: ರಾಮಕೃಷ್ಣನಗರ ಬಡಾವಣೆ ಸ್ವಚ್ಛತೆಯಿಂದ ಹಾಗೂ ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದೆ,ಜತೆಗೆ ಪ್ರವಾಸಿ ತಾಣವಾಗಿಯೂ ಪ್ರಸಿದ್ದಿಯಾಗುತ್ತಿದೆ ಎಂದು ಮೂಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಬಣ್ಣಿಸಿದರು.

ಚಾಮುಂಡೇಶ್ವರಿ ಯುವ ಬಳಗ ವತಿಯಿಂದ ರಾಮಕೃಷ್ಣನಗರದ ವೃತ್ತದಲ್ಲಿ ಮಂಗಳವಾರ ಶ್ರೀರಾಮಕೃಷ್ಣ ಪರಮಹಂಸರ 188ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಆಧ್ಯಾತ್ಮಿಕ ಜಗತ್ತು ಕಾರ್ಯಮಕ್ರಮದಲ್ಲಿ ಅವರು ಮಾತನಾಡಿದರು.

ಈ ವೇಳೆ ಪರಮಹಂಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿದರು.

ರಾಮಕೃಷ್ಣನಗರ ಬಡಾವಣೆಯ ಪರಿಸರ ಸ್ವಚ್ಛತೆಯಿಂದ ಕೂಡಿದ್ದು, ಸಹಸ್ರಾರು ಹಿರಿಯ ನಾಗರೀಕರು ವಾಯುವಿಹಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ರಾಮಕೃಷ್ಣ ಪರಮಹಂಸರ ವೃತ್ತ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯೂ  ಆಕರ್ಷಿತವಾಗಲಿದೆ ಎಂದು ಹೇಳಿದರು.

ಸ್ವಚ್ಛತೆಯಲ್ಲಿ ಇತರೆ ಬಡಾವಣೆಗಳಿಗೆ ಮಾದರಿಯಾಗಿರುವ ರಾಮಕೃಷ್ಣನಗರದಲ್ಲಿ  ಸಂಗೀತಾಸಕ್ತರು, ಹಿರಿಯನಾಗರೀಕರು ಹೆಚ್ಚಿ ಇದ್ದಾರೆ.

ಮುಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಕಲ್ಪಿಸಿ  ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಲಾಗುವುದು ಭರವಸೆ ಯಶಸ್ವಿ ಭರವಸೆ ನೀಡಿದರು.

ಹಿರಿಯ ಸಮಾಜ ಸೇವಕ ರಘುರಾಮ ವಾಜಪೇಯಿ ಮಾತನಾಡಿ ಇಂದು ಮೈಸೂರಿನಲ್ಲಿ ಪರಮಾಹಂಸರ ನೆನಪು ಮಾಡಿಕೊಳ್ಳಲು ಕಾರಣಕರ್ತರು ಸ್ವಾಮಿ ವಿವೇಕಾನಂದರು ಎಂದು ಹೇಳಿದರು.

1892ರಲ್ಲಿ ಬಂದಾಗ ಸುಮಾರು 21 ದಿವಸಗಳ ಕಾಲ ಪ್ರತಿನಿತ್ಯ ರಾಮಕೃಷ್ಣರ ಉಪನ್ಯಾಸವನ್ನು ಮಾಡುತ್ತಿದ್ದರು. ಅದರ ಪ್ರಭಾವದಿಂದಲೇ ಇಂದು ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪನೆಯಾಗಿದೆ.

ಈಗ ರಾಮಕೃಷ್ಣ ವೃತ್ತದಲ್ಲಿ ಭವ್ಯ ರಾಮಕೃಷ್ಣ ಪರಮಹಂಸರ ಪ್ರತಿಮೆ ಸ್ಥಾಪಿತವಾಗಿರುವುದು ಒಳ್ಳೆಯದು ಎಂದರು.

ಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ನಗರ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮೀದೇವಿ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ನಗರ ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್,ಸಿದ್ದೇಶ್, ವಿನಯ್ ಕನಗಾಲ್, ಸುಚೇಂದ್ರ, ಮೈಲಾ ವಿಜಯ್ ಕುಮಾರ್, ಚಕ್ರಪಾಣಿ, ಎಸ್. ಬಿ. ವಾಸದೇವಮೂರ್ತಿ, ಸುರೇಶ್ ಗೋಲ್ಡ್, ಮಿರ್ಲೆ ಪನೀಶ್, ಹಿರಿಯಣ್ಣ, ಪ್ರತಾಪ್, ಕೇಬಲ್ ಮಹೇಶ್, ಜಯರಾಮ್ ಮತ್ತಿತರರು ಭಾಗವಹಿಸಿದ್ದರು.