ಮೈಸೂರು: ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಹಾಗಾಗಿ ಪ್ರಾಣಿಪಕ್ಷಿಗಳು ಮತ್ತು ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಶಿವಕುಮಾರ್ ಹೇಳಿದರು.
ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ ಕಾರಂಜಿ ಕೆರೆ ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ : ಮಹಾಪೌರರಾದ ಶಿವಕುಮಾರ್ ಹೇಳಿದರು
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನೀರಿನ ತೊಟ್ಟಿಗೆ ನೀರು ಹಾಕುವ ಮೂಲಕ ಮೂಲಕ ಮೂಕಸ್ಪಂದನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮೇಯರ್ ಮಾತನಾಡಿದರು.
ಬೇಸಿಗೆಯ ತೀವ್ರತೆ ಹಿನ್ನೆಲೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಆಹಾರದ ಬಟ್ಟಲು ಅಳವಡಿಸುವ ಮೂಲಕ ಹಾಗೂ ಜವಾಬ್ದಾರಿಯುತ ಪ್ರಾಣಿ – ಪಕ್ಷಿಪ್ರಿಯರಿಗೆ ಉಚಿತವಾಗಿ ನೀರಿನ ತೊಟ್ಟಿ ಕೊಡುವ ಮೂಲಕ ಮೂಕಸ್ಪಂದನಾ ಎಂಬ ಜಾಗೃತಿ ಅಭಿಯಾನನ್ನು ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡ ಮತ್ತು ಜೀವದಾರ ರಕ್ತ ನಿಧಿ ಕೇಂದ್ರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಭೂಮಿಯಲ್ಲಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕಿದೆಯೋ ಹಾಗೆಯೇ ಪ್ರಾಣಿ,ಪಕ್ಷಿಗಳಿಗೂ ಇದೆ. ಬಿಸಿಲಿನ ತಾಪಮಾನದಿಂದ ಬಸವಳಿಯುವ ಪ್ರಾಣಿಪಕ್ಷಿಗಳಿಗೆ ನೀರು, ಆಹಾರ ನೀಡಲು ಮುಂದಾಗಬೇಕೆಂದು ಅವರು ಕರೆ ನೀಡಿದರು.
ಆದಷ್ಟು ನಿಮ್ಮ ಮನೆಗಳ ತಾರಸಿ ಮೇಲೆ ಮನೆಯ ಮುಂಭಾಗ ನೀರು, ಆಹಾರ ನೀಡಿದರೆ ಒಂದಷ್ಟು ಮೂಕ ಪ್ರಾಣಿಗಳ ಜೀವರಕ್ಷಣೆ ಮಾಡಿದಂತಾಗುತ್ತದೆ ಎಂದು ಮೇಯರ್ ತಿಳಿಸಿದರು.
ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಮಾತನಾಡಿ ಸಮಾರು ವರ್ಷಗಳ ಹಿಂದೆ ಮೈಸೂರಿನ ಮನೆಗಳ ಮುಂದೆ ಹಸು,ಕರು, ಮೂಕ ಪ್ರಾಣಿ, ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿಯನ್ನು ನಿರ್ಮಿಸುತ್ತಿದ್ದರು ಎಂದು ಸ್ಮರಿಸಿದರು.
ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿದ್ದವು , ಆದರೆ ಈ ದಿನಗಳಲ್ಲಿ ಅವೆಲ್ಲವೂ ಕಣ್ಮರೆಯಾಗಿವೆ ಎಂದು ವಿಷಾದಿಸಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ ಇತಿಹಾಸ ಪುರಾಣಗಳಲ್ಲಿ ಒಂದೊಂದು ಹಬ್ಬಗಳಲ್ಲಿ ದೇವತೆಗಳಿಗೂ ಸಹ ಪ್ರಾಣಿ,ಪಕ್ಷಿಗಳನ್ನ ವಾಹನಗಳಾಗಿ ಮಾಡಿ ಪೂಜಿಸಲಾಗಿದೆ ಇದು ಪರಿಸರ ಸಂರಕ್ಷಣೆಯ ಸಂದೇಶವಗಿದೆ ಇದನ್ನು ನಾವು ಅರಿಯಬೇಕು ಎಂದು ತಿಳಿಸಿದರು.
ಕೇಂದ್ರ ಪ್ರಾಣಿಗಳ ಕಲ್ಯಾಣ ಮಂಡಳಿಯ ರಾಜ್ಯ ಚೇರ್ಮನ್ ಮಿತ್ತಲ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್,ಆಯುರ್ ಪೋರ್ಟ್ ವೆಲ್ ನೆಸ್ ವ್ಯವಸ್ಥಾಪಕ ನಿರ್ದೇಶಕ ಭರತ್ ರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಸವಿತಾ ಘಾಟ್ಕೆ , ಅಜಯ್ ಶಾಸ್ತ್ರಿ, ರವಿಶಂಕರ್, ಜಿ ರಾಘವೇಂದ್ರ, ರಾಕೇಶ್, ಸುಚೇಂದ್ರ ,ಚಕ್ರಪಾಣಿ, ಎಸ್. ಎನ್. ರಾಜೇಶ್, ಮೋಹನ್ ಕುಮಾರ್ ಗೌಡ, ರವಿಚಂದ್ರ, ರಂಗನಾಥ್, ಟಿ. ಎಸ್. ಅರುಣ್, ರಾಜಗೋಪಾಲ್, ನವೀನ್, ಸುರೇಶ್ ಗೋಲ್ಡ್, ಮೈ. ಲಾ. ವಿಜಯ್ ಕುಮಾರ್, ಆನಂದ್, ಲಿಂಗರಾಜು, ಜೀವನ್, ವಾಸುದೇವಮೂರ್ತಿ ಮತ್ತಿತರರು ಅಭಿಯಾನದಲ್ಲಿ ಭಾಗಿಯಾಗಿದ್ದರು.

