ಸವಾಲಿನ ಕಾರ್ಯ ನಿರ್ವಹಿಸಿದ ಪಶು ವೈದ್ಯೆ

ಮೈಸೂರು: ಪುರುಷ ವೈದ್ಯರಿಗೂ ಸವಾಲಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮಹಿಳಾ ಪಶು ವೈದ್ಯೆಯೊಬ್ಬರು‌ ಎಲ್ಲರ ಮೆಚ್ಚುಗೆಗೆ‌ ಪಾತ್ರರಾಗಿದ್ದಾರಲ್ಲದೆ‌ ಇತರೆ‌ ವೈದ್ಯರಿಗೂ‌ ಮಾದರಿಯಾಗಿದ್ದಾರೆ.

ಮೈಸೂರಿನ ಹಿನ್ ಕಲ್‌ ಬಳಿ ಮುರ್ರಾ ತಳಿಯ ಎಮ್ಮೆಯೊಂದು ಪ್ರಸವವೇದನೆ ಅನುಭವಿಸಿ,ನೊವಿನಲ್ಲೇ ಕರುವಿಗೆ ಜನ್ಮ ನೀಡಿದೆ.

ನಂತರ ಅದರ ಗರ್ಭಕೋಶ ಹೊರಬಂದಿದೆ. ಎಮ್ಮೆಗಳಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಗರ್ಭಕೋಶನವನ್ನು ಯಥಾ ಸ್ಥಿತಿಯಲ್ಲಿ ಇರಿಸುವುದು ದುಸ್ತರವಾದ ಕೆಲಸ.

ಅದನ್ನು ಸರಿಪಡಿಸಲು ಸಾಕಷ್ಟು ಪರಿಶ್ರಮ ಮತ್ತು ಸಾಮರ್ಥ್ಯ ಬೇಕಾಗುತ್ತದೆ. ಪುರುಷ ಪಶು ವೈದ್ಯರಿಗೂ ಇದು ಅನೇಕ ಬಾರಿ ಸವಾಲಾಗಿರುವ ಉದಾಹರಣೆ ಇದೆ.

ನಡು ರಸ್ತೆಯಲ್ಲಿ ಎಲ್ಲರೆದುರು ಪಶುಗಳಿಗೆ ಕರುಗಳ ಜನನ ಕಾರ್ಯ ನಿರ್ವಹಿಸುವುದು ಕಷ್ಟದ ಕೆಲಸ.

ಪಶು ವೈದ್ಯಕೀಯ ಕ್ಷೇತ್ರದಲ್ಲೂ ಮಹಿಳೆ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬದಕ್ಕೆ ಈ ಮಹಿಳಾ‌ ವೈದ್ಯೆ ಸಾಕ್ಷಿಯಾಗಿದ್ದಾರೆ.

ಇವರ ಹೆಸರು ಡಾ. ವರಲಕ್ಷ್ಮಿ.ಹಿನಕಲ್ ತಾಲೂಕಿನ ಪಶು ವೈದ್ಯಾಧಿಕಾರಿ.

ಡಾ.ವರಲಕ್ಷ್ಮಿ ಅವರು ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲ ಪಶು ವೈದ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಹಿಳೆ ಯಾವ ಕ್ಷೇತ್ರದಲ್ಲಾದರೂ ಎಂಥಹುದೇ ಪರಿಸ್ಥಿತಿಯಲ್ಲೂ ಸಮರ್ಥರಾಗಿ ನಿಭಾಯಿಸುತ್ತಾರೆ ಎಂಬುದಕ್ಕೆ ಇದು ನೈಜ ಉದಾಹರಣೆ