ಲ್ಯಾಂಡರ್‌ನಿಂದ ಹೊರಬರುವ ರೋವರ್‌ನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದ ಇಸ್ರೋ

ಬೆಂಗಳೂರು: ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಯಶಸ್ವಿಯಾಗುತ್ತಿದ್ದಂತೆಯೇ  ಲ್ಯಾಂಡರ್‌ನಿಂದ ಹೊರಬರುವ ರೋವರ್‌ನ ಮೊದಲ ಫೋಟೋವನ್ನು ಇಸ್ರೋ ಬಿಡುಗಡೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ರೋವರ್ ಲ್ಯಾಂಡರ್‌ನಿಂದ ಕೆಳಕ್ಕೆ ಇಳಿದಿದ್ದು, ಭಾರತವು ಚಂದ್ರನ ಮೇಲೆ ನಡೆದಾಡಿತು. ಶೀಘ್ರದಲ್ಲೇ ಹೆಚ್ಚಿನ ವಿವರ ಹಂಚಿಕೊಳ್ಳುತ್ತೇವೆ ಎಂದು ಹೇಳಿದೆ.

ಇದಕ್ಕೂ ಮುನ್ನಾ ಚಂದ್ರಯಾನ-3 ಮಿಷನ್ ನ  ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲ್ಮೈ ನಲ್ಲಿ ಇಳಿಯುವಾಗ ಸೆರೆ ಹಿಡಿಯಲಾದ ನಾಲ್ಕು ಫೋಟೋಗಳನ್ನು ಇಸ್ರೋ ಹಂಚಿಕೊಂಡಿದ್ದನ್ನು ಸ್ಮರಿಸಬಹುದು.