ನವದೆಹಲಿ: ಲೋಕಸಭೆ,ವಿಧಾನಸಬೆಯಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಕೊಡುವ ಐತಿಹಾಸಿಕ ಮಸೂದೆಗೆ ಲೋಸಭೆಯಲ್ಲಿ ಅಂಗೀಕಾರ ದೊರೆಯಿತು.
ಲೋಕಸಭೆಯಲ್ಲಿ ಈ ಮಸೂದೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.ಎಂಟು ಗಂಟೆಗಳ ಕಾಲ ಸಂಸತ್ ಸದಸ್ಯರು ಚರ್ಚಿಸಿದರು.
ನಂತರ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು.
ಈ ಮಹಿಳಾ ಮೀಸಲಾತಿ ಮಸೂದೆ ಪರ ಒಟ್ಟು 454 ಮತ ಬಂದಿದ್ದರೆ ಇಬ್ಬರು ಮಾತ್ರ ವಿರೋಧ ವ್ಯಕ್ತಪಡಿಸಿದರು.
ಒವೈಸಿ ಮತ್ತು ಇಂತಿಯಾಜ್ ಈ ಬಿಲ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
87 ಸದಸ್ಯರು ಮತದಾನದ ವೇಳೆ ಗೈರಾಗಿದ್ದರು.
ಬಹುಶಃ ಗುರುವಾರ ಈ ಬಿಲ್ ಕುರಿತು ರಾಜ್ಯಸಭೆಯಲ್ಲಿ ಚರ್ಚೆಯಾಗಿ ಮಂಡನೆಯಾಗಿ ಅಂಗೀರವಾಗುವ ಸಾಧ್ಯತೆ ಇದೆ.
ತದನಂತರ ಇದು ಕಾಯಿದೆಯಾಗಿ ಜಾರಿಯಾಗಲಿದೆ

