ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರು ಭಾರತದ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಾರಿಡಾರ್ ಪ್ರಾರಂಭಿಸುವ ಮೂಲಕ ದೇಶದ ಮೊದಲ ಇಂಟರ್ಸಿಟಿ ರ‍್ಯಾಪಿಡ್-ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಶುಕ್ರವಾರ ಬೆಳಗ್ಗೆ 11.15ಕ್ಕೆ ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿಎಸ್ ಕಾರಿಡಾರ್‌ನ ಆದ್ಯತೆಯ ವಿಭಾಗವನ್ನು ಉತ್ತರ ಪ್ರದೇಶದ ಸಾಹಿಬಾಬಾದ್ ರಾಪಿಡ್‍ಎಕ್ಸ್ ನಿಲ್ದಾಣದಲ್ಲಿ ಲೋಕಾರ್ಪಣೆ ಮಾಡಿದರು.
ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್ ಆರ್ ಟಿಎಸ್) ಆರಂಭದ ಅಂಗವಾಗಿ ಮೋದಿ ಸಾಹಿಬಾಬಾದ್‍ನಿಂದ ದುಹೈ ಡಿಫೋಗೆ ಸಂಪರ್ಕಿಸುವ ರಾಪಿಡ್‍ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಫೋ ಸೇರಿದಂತೆ 5 ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿವೆ.
ಆರ್ ಆರ್ ಟಿಎಸ್ ಹೊಸ ರೈಲು-ಆಧಾರಿತ, ಸೆಮಿ-ಹೈಸ್ಪೀಡ್, ಹೆಚ್ಚಿನ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯಾಗಿದೆ. ಪ್ರತಿ ಗಂಟೆಗೆ 180 ಕಿಲೋಮೀಟರ್ ವಿನ್ಯಾಸದ ವೇಗದೊಂದಿಗೆ, ಆರ್ ಆರ್ ಟಿಎಸ್ ಒಂದು ಪರಿವರ್ತನಾಶೀಲ ಪ್ರಾದೇಶಿಕ ಅಭಿವೃದ್ಧಿ ಉಪಕ್ರಮವಾಗಿದೆ.
ಇದು ಪ್ರತಿ 15 ನಿಮಿಷಗಳಿಗೊಮ್ಮೆ ಅಂತರನಗರ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಇದರಡಿ ರೈಲು ಅವಶ್ಯಕತೆಗೆ ಅನುಗುಣವಾಗಿ ಪ್ರತಿ 5 ನಿಮಿಷಗಳ ಪುನರಾರ್ತನೆ ಆಗುತ್ತಿರುತ್ತದೆ.
ದೆಹಲಿ – ಗುರುಗ್ರಾಮ್, ಎಸ್‍ಎನ್‍ಬಿ- ಅಳ್ವಾರ್ ಕಾರಿಡಾರ್, ಮತ್ತು ದೆಹಲಿ ಪಾಣಿಪತ್ ಕಾರಿಡಾರ್. ದೆಹಲಿ-ಗಾಜಿಯಾಬಾದ್-ಮೀರತ್ ಆರ್ ಆರ್ ಟಿಎಸ್ ಅನ್ನು 30,000 ಕೋಟಿ ರೂ. ಅಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಗಂಟೆಗೆ ಸುಮಾರು 160 ಕಿ.ಮೀ ವೇಗವನ್ನು ಹೊಂದಿರುವ ಈ ಕಾರಿಡಾರ್ ದೆಹಲಿಯಿಂದ ಮೀರತ್‍ಗೆ ಪ್ರಯಾಣಿಸಲು 1 ಗಂಟೆ ತೆಗೆದುಕೊಳ್ಳುತ್ತದೆ. ಈ ನಡುವೆ ನಗರ ಕೇಂದ್ರಗಳಾದ ಗಾಜಿಯಾಬಾದ್, ಮುರಾದ್‍ನಗರ ಮತ್ತು ಮೋದಿನಗರದ ಮೂಲಕ ಹಾದುಹೋಗುತ್ತದೆ.
ಪ್ರತಿ ರ್‍ಯಾಪಿಡ್ ಎಕ್ಸ್ ರೈಲು ಒಂದು ಪ್ರೀಮಿಯಂ ಕೋಚ್‍ನ್ನು ಹೊಂದಿದ್ದು, ಒರಗುವ ಆಸನಗಳು, ಕೋಟ್ ಹುಕ್ಸ್, ಮ್ಯಾಗಜೀನ್ ಹೋಲ್ಡರ್ ಗಳನ್ನು ಹೊಂದಿದೆ.
ಈ ಕೋಚ್‍ಗೆ ಪ್ಲಾಟ್‍ಫಾಮ್‍ನಲ್ಲಿರುವ ಪ್ರೀಮಿಯಂ ಲಾಂಜ್ ಮೂಲಕ ಮಾತ್ರ ಪ್ರವೇಶಿಸಬಹುದು. ರೈಲಿನಲ್ಲಿ ಒಂದು ಕೋಚ್‍ನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಸಂಪೂರ್ಣ ಹವಾನಿಯಂತ್ರಿತ ರ್‍ಯಾಪಿಡ್ ಎಕ್ಸ್ ರೈಲುಗಳನ್ನು ಪ್ರಾದೇಶಿಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದೆ. 2*2 ಅಡ್ಡ ಆಸನಗಳು, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ಲಗೇಜ್ ಗೆ ಪ್ರತ್ಯೇಕ ಸ್ಥಳ, ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‍ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಸೌಲಭ್ಯದಂತಹ ಫೀಚರ್‍ಗಳನ್ನು ಹೊಂದಿದೆ. ಡೈನಾಮಿಕ್ ರೂಟ್ ಮ್ಯಾಪ್‍ಗಳು, ಆಟೋ ಕಂಟ್ರೋಲ್ ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್, ಹೀಟಿಂಗ್ ವೆಂಟಿಲೇಶನ್, ಹವಾನಿಯಂತ್ರಣ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳು ಇದರಲ್ಲಿವೆ.

