ಒಳ್ಳೊಳ್ಳೆ ಸ್ಥಾನಕ್ಕೆ ಹೋಗಿರುವವರೆಲ್ಲ ಸರ್ಕಾರಿ ಶಾಲೆಯಲ್ಲಿ ಓದಿದವರು -ಪ್ರತಾಪ್ ‌ಸಿಂಹ

ಮೈಸೂರು: ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಜ್ಞಾನ ಕಡಿಮೆ ಎಂಬ ತಪ್ಪು ಕಲ್ಪನೆ ತೊರೆದು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಸಂಸದ ಪ್ರತಾಪ್ ಸಿಂಹ ವಿದ್ಯಾರ್ಥಿಗಳಿಗೆ ಹೇಳಿದರು.

ಮೈಸೂರಿನ ಮಂಚೇಗೌಡನ ಕೊಪ್ಪಲಿ ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ (ಕರ್ನಾಟಕ ಪಬ್ಲಿಕ್ ಶಾಲೆ) 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಕೆ ಹರೀಶ್ ಗೌಡ ಅವರೊಂದಿಗೆ ಉದ್ಘಾಟಿಸಿ ಸಂಸದರು ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ‌ಓದಿದ ವಿಶ್ವೇಶ್ವರಯ್ಯನವರೇ ಮಹಾನ್ ವ್ಯಕ್ತಿ ಆದರು, ಸರ್ಕಾರಿ ಶಾಲೆಯಲ್ಲಿ ಓದಿದ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಯಾದರು, ಸರ್ಕಾರಿ ಓದಿದ ಮೋದಿಜಿ ಅವರು ಪ್ರಧಾನಿಯಾಗಿದ್ದಾರೆ. ಒಳ್ಳೆ ಒಳ್ಳೆ ಸ್ಥಾನಕ್ಕೆ ಹೋಗಿರುವವರೆಲ್ಲರೂ ಸಾಮಾನ್ಯ ಸರ್ಕಾರಿ ಶಾಲೆಯಲ್ಲಿ ಓದಿದವರಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಸಂತ ಜೋಸೆಫ್, ಮೌಂಟ್ ಕಾರ್ಮೆಲ್ ಓದಿದವರು ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಆಗಿರಬಹುದು,ಆದರೆ ಒಳ್ಳೆ, ಒಳ್ಳೆ ಸ್ಥಾನಕ್ಕೆ ಹೋಗಿರುವವರೆಲ್ಲ ಸರ್ಕಾರಿ, ಸಾಮಾನ್ಯ ಶಾಲೆಯಲ್ಲಿ ಓದಿದವರು ಎಂದು ಹೇಳಿದರು.

ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ ಬಂದಿದ್ದೇನೆ, ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಾಸ್ಟರ್ ಡಿಗ್ರಿ ವರೆಗೂ ನಾನು ಸರ್ಕಾರಿ ಶಾಲೆಯಲ್ಲಿ ಓದಿ ಈ ಸ್ಥಾನಕ್ಕೆ ಬಂದವನು ಸರ್ಕಾರಿ ಶಾಲೆಯಲ್ಲಿ ಓದಿದ್ದರ ಬಗ್ಗೆ ಹೆಮ್ಮೆ ಇರಬೇಕು ಎಂದು ಹಿತವಚನ ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಓದಿದರೆ ಜ್ಞಾನದ ಪ್ರಮಾಣ ಕಡಿಮೆಯಾಗುತ್ತದೆ ಎಂದು ತಪ್ಪಾಗಿ ಭಾವಿಸಬೇಡಿ ಆದರೆ ಮೈಬಗ್ಗಿಸಿ ಓದೋದನ್ನ ರೂಢಿಸಿಕೊಳ್ಳಿ ಎಂದು ಪ್ರತಾಪ್ ಸಿಂಹ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಾಸಕ ಹರೀಶ್ ಗೌಡ ಮಾತನಾಡಿ ಈ ಶಾಲೆ ತುಂಬಾ ಸುಸಜ್ಜಿತವಾಗಿದೆ ಮಂಚೇಗೌಡನ ಕೊಪ್ಪಲಿನ ಜನತೆ ಈ ಶಾಲೆ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಾಲೆ ಅತ್ಯತ್ತಮವಾಗಿದೆ,ಒಳ್ಳೆಯ ಟೀಚರ್ ಗಳು ಲೆಕ್ಚರರ್ ಗಳು ಇಲ್ಲಿ ಇದ್ದಾರೆ. ನನಗೆ ಈ ಶಾಲೆಯ ಬಗ್ಗೆ ವಿಶೇಷ ಪ್ರೀತಿ ಇದೆ ಎಂದು ತಿಳಿಸಿದರು.

ಈ ಸರ್ಕಾರಿ ಶಾಲೆಯಲ್ಲಿ ಶಿಸ್ತು, ಸಂಯಮ ಅಚ್ಚುಕಟ್ಟಾಗಿದೆ, ಶಾಲೆಗೆ ಮತ್ತು ಕಾಲೇಜಿಗೆ ಏನೇನು ಬೇಕು ಎಂಬುದನ್ನ ಪಟ್ಟಿ ಮಾಡಿ ಕೊಟ್ಟಿದ್ದಾರೆ.

ನಾನು ಮತ್ತು ಸಂಸದ ಪ್ರತಾಪ್ ಸಿಂಹ‌ ಅವರು ಸೇರಿ ನಮ್ಮ ಕೈಲಿ ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ನಾನು ವೈಯಕ್ತಿಕವಾಗಿ ಅಲ್ಲದೆ ಸರ್ಕಾರದಿಂದಲೂ ಅನುದಾನ ತಂದು ಸೌಲಭ್ಯಗಳನ್ನು ಕೊಡಿಸುವುದಾಗಿ ಆಶ್ವಾಸನೆ ನೀಡಿದರು ಹರೀಶ್ ಗೌಡ.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಪ್ರೇಮ ಶಂಕರೇಗೌಡ, ಮಾಜಿ ಉಪ ಮಹಾಪೌರ ಮಹದೇವಪ್ಪ,ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮಂಜೇಗೌಡನ ಕೊಪ್ಪಲು ರವಿ, ಡೆಲ್ಲಿ ರವಿ, ಶಾಲೆಯ ಮುಖ್ಯ ಮುಖ್ಯೋಪಾಧ್ಯಾಯರಾದ ಶುಭ,

ಶಾಲಾ ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ವೃಂದ ಮತ್ತಿತರರು ಹಾಜರಿದ್ದರು.