ತಮಿಳುನಾಡು ಗುಟ್ಟಾಗಿ ಮೂರು ನದಿಗಳ ಜೋಡಣೆ ಯೋಜನೆಗೆ ಮುಂದಾಗಿದೆ -ಜೆಪಿ

ಮೈಸೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ‌ನಡೆಯುತ್ತಿರುವ ಹೋರಾಟ 61ನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಚಲನಚಿತ್ರ ನಟ ಜಯ ಪ್ರಕಾಶ್ (ಜೆಪಿ )ಅವರು ಮಾತನಾಡಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳುವ ದುರುದ್ದೇಶದಿಂದ ತಮಿಳುನಾಡು ಗುಟ್ಟಾಗಿ ಕಾವೇರಿ,ಗುಂಡಾರ್ ಮತ್ತು ಒಯ್ದೈ ನದಿಗಳ ಜೋಡಣೆಗೆ ಈಗಾಗಲೇ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಕೂಡಲೇ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ಆ ಯೋಜನೆಯನ್ನು ತಡೆಯಬೇಕೆಂದು ಒತ್ತಾಯಿಸಿದರು.

ನಮ್ಮ ಮೇಕೆದಾಟು ಯೋಜನೆ ಸಂಪೂರ್ಣಗೊಂಡ ನಂತರ ಈ ವಿಚಾರವಾಗಿ ಸರ್ಕಾರ ಅನುಮತಿ ನೀಡಬಹುದು ಅಲ್ಲಿವರೆಗೂ ತಮಿಳುನಾಡು ಗುಟ್ಟಾಗಿ‌ ಮಾಡಹೊರಟಿರುವ ಯೋಜನೆಯನ್ನು ಕಾನೂನು ರೀತಿಯಲ್ಲಿ ನಿಲ್ಲಿಸಬೇಕು ಎಂದು ಸರ್ಕಾರಗಳನ್ನು ಆಗ್ರಹಿಸಿದರು.

ಇಂದಿನ ಪ್ರತಿಭಟನೆಯಲ್ಲಿ ಕನ್ನಡದ ಕಂದ ಮೂಗೂರು ನಂಜುಂಡಸ್ವಾಮಿ, ರಾಜ್ಯ ರೈತ ಸಂಘದ ಸಿಂಧುವಳ್ಳಿ ಶಿವಕುಮಾರ್, ಪುಟ್ಟೇಗೌಡ ಬಸವರಾಜ್, ಲೋಕೇಶ್ ಗೌಡ, ಗಾಣಿಗನಕೊಪ್ಪಲು ನಾಗರಾಜು, ಕಾವೇರಿ ಕ್ರಿಯಾ ಸಮಿತಿಯ ತೇಜೇಶ್ ಲೋಕೇಶ್ ಗೌಡ, ಶಿವನಾಯ್ಕರ್, ಪೈಲ್ವಾನ್ ಬಾಲಾಜಿ, ಪೈಲ್ವಾನ್ ಬಲರಾಮ್, ಗೋಲ್ಡ್ ಸುರೇಶ್, ಕೆ ಮಂಜುಳಾ, ಪುಷ್ಪವತಿ, ಆರ್. ಮಂಜುಳಾ ,ಮಹೇಶ್ ಗೌಡ,ರವೀಶ್ ನೇಹ, ಆಟೋ ಮಹಾದೇವ, ಅಶೋಕ್ ಕೃಷ್ಣ ,ನೇಹ ,ಕೃಷ್ಣಯ್ಯ, ವಿಷ್ಣು ಪಾಲ್ಗೊಂಡಿದ್ದರು.