ಇಡಿ ಅಕೌಂಟ್ಸ್‌ ಮಾಹಿತಿ ಕೇಳಿತ್ತು ಕೊಟ್ಟಿದ್ದೇವೆ: ಪರಮೇಶ್ವರ್‌

ಬೆಂಗಳೂರು: ಇಡಿ ಅಧಿಕಾರಿಗಳು ನಮ್ಮ ಕಾಲೇಜಿಗೆ ಬಂದು ಅಕೌಂಟ್ಸ್‌ ಮಾಹಿತಿ ಕೇಳಿದರು ಅದನ್ನು ನಾವು ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ಕೇಳಿದರೂ ನೀಡಿ ಎಂದು ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಇಡಿ ಅಧಿಕಾರಿಗಳು ನಮ್ಮ ಮೂರು ಕಾಲೇಜುಗಳಿಗೆ ಭೇಟಿ ಕೊಟ್ಟಿದ್ದಾರೆ. ಅವರಿಗೆ ಏನು ಸೂಚನೆ ಬಂದಿದೆಯೋ ಗೊತ್ತಿಲ್ಲ. ಅವರು ಕೇಳಿದ ದಾಖಲೆಗಳನ್ನು ನಾವು ಕೊಡುತ್ತೇವೆ ಎಂದು ತಿಳಿಸಿದರು.

ಇಡಿ ಅಧಿಕಾರಿಗಳಿಗೆ ಎಲ್ಲ ಸಹಕಾರ ನೀಡುತ್ತೇನೆ, ನಾನು ಯಾವುದನ್ನು ಮುಚ್ಚಿಟ್ಟಿಲ್ಲ,ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ನಾನು ಕಾನೂನಿಗೆ ಗೌರವ ಕೊಡುತ್ತೇನೆ ಎಂದು ಪರಮೇಶ್ವರ್ ಹೇಳಿದರು.