ಮೈಸೂರು: ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದ ಗೋದಾಮುಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಲ್ಲದೆ ದುಷ್ಟರ ಪಾಲಾಗುತ್ತಿದ್ದನ್ನು ತಪ್ಪಿಸಿದ್ದಾರೆ.
ದಾಳಿ ವೇಳೆ 18 ಲಕ್ಷ ಮೌಲ್ಯದ 1296 ಮೂಟೆ ಯೂರಿಯಾ ಸೀಸ್ ಮಾಡಲಾಗಿದೆ.
ಜಿಲ್ಲೆಯ ಹುಣಸೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವನದ ಮುಂಭಾಗ ಇರುವ ಶೆಡ್ ಗಳಲ್ಲಿ ಅಕ್ರಮವಾಗಿ ಯುರಿಯಾ ದಾಸ್ತಾನು ಮಾಡಲಾಗಿತ್ತು.
ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸರ್ಕಾರದಿಂದ ಬಿಡುಗಡೆಯಾಗಿ ರೈತರಿಗೆ ಸೇರಬೇಕಿದ್ದ ಗೊಬ್ಬರ ದಂಧೆಕೋರರ ಪಾಲಾಗುವುದನ್ನು ಅಧಿಕಾರಿಗಳು ತಡೆದಿದ್ದಾರೆ.
ದಾಳಿ ನಡೆಸುತ್ತಿದ್ದಾಗಲೇ ಶೆಡ್ ನಲ್ಲಿದ್ದ ವ್ಯಕ್ತಿಗಳು ಓಡಿಹೋಗಿದ್ದಾರೆ.ಈ ವೇಳೆ
ಮೂರು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಾಸಗಿ ಸಂಸ್ಥೆಯ ಬ್ರಾಂಡ್ ಇರುವ ಚೀಲಗಳು ಸ್ಥಳದಲ್ಲಿ ಪತ್ತೆಯಾಗಿದ್ದು,
ಖಾಸಗಿ ಕಂಪನಿ ಹೆಸರಿನ ಚೀಲಗಳಿಗೆ ಯುರಿಯಾ ಬದಲಾಯಿಸಿ ಮಾರಾಟ ಮಾಡುವ ದಂಧೆ ಎಂದು ಶಂಕಿಸಲಾಗಿದೆ.
ಸಹಾಯಕ ಕೃಷಿ ಅಧಿಕಾರಿ ಅನಿಲ್ ಹಾಗೂ ಕೃಷಿ ಅಧಿಕಾರಿ ಜಯಕುಮಾರ್ ಅವರು ಪೊಲೀಸರ ನೆರವಿನಲ್ಲಿ ದಾಳಿ ನಡೆಸಿದ್ದಾರೆ.
ಈ ದಂದೆಯ ಹಿಂದೆ ಪ್ರಭಾವಿ ಕೈಗಳ ಬೆಂಬಲ ಇರುವ ಶಂಕೆ ಇದೆ. ಇದರ ಹಿಂದಿನ ಜಾಲ ಪತ್ತೆ ಹಚ್ಚಲು ಕೃಷಿ ಇಲಾಖೆ ಅಧಿಕಾರಿಗಳು ಒತ್ತು ನೀಡಬೇಕಿದೆ.
ಹುಣಸೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

