ಈ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ: ಜನರೇ ಎಚ್ಚರ

ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಇರುತ್ತದೆ ಜನರು ಅತಿ ಎಚ್ಚರ ವಹಿಸಬೇಕಿದೆ.

ಈ ಬಾರಿ ಹೆಚ್ಚು ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆಯೇ ಎಚ್ಚರಿಕೆ ನೀಡಿದೆ.

ಚಳಿಗಾಲ ಮುಗಿದುಹೋಯಿತು,ಬೇಸಿಗೆ ದಾಂಗುಡಿ ಇಟ್ಟಿದೆ, ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಈಗಾಗಲೇ ತಾಪಮಾನದಲ್ಲಿ ಏರಿಕೆಯಾಗುತ್ತದೆ.

ಈ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಜನರು ಎಚ್ಚರ ದಿಂದ ಇರಬೇಕಿದೆ.

ಈಗಾಗಲೇ ಕಲಬುರಗಿ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಇದೆ. 2 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನೂ ತಾಪಮಾನ ಹೆಚ್ಚಾಗಲಿದೆ, ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ 42 ರಿಂದ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಲಿದೆ. ಬೆಂಗಳೂರು,ಮೈಸೂರಲ್ಲೂ ಕತಾಪಮಾನ 39 ಡಿಗ್ರಿ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.

ಮಾ.1ರಿಂದ ಬೇಸಿಗೆ ಆರಂಭವಾಗಲಿದೆ, ಆದರೆ ಫೆಬ್ರವರಿಯಲ್ಲೇ ಬಿಸಿಲು ಬಹಳ ಇದೆ. ಜಾಗತಿಕ ತಾಪಮಾನ, ತೇವಾಂಶ ಕೊರತೆಯಿಂದ ಬಿಸಿಲು ಹೆಚ್ಚಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.