ಸಾಂಸ್ಕೃತಿಕ ನಗರಿ ಸೇರಿ ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ

ಬೆಂಗಳೂರು: ರಾಜ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸೇರಿ 12 ಹೊಸ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ನೂತನವಾಗಿ 12 ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿ,ನೂತನ ಠಾಣೆಗಳ ವಿವರ ನೀಡಿದರು.

ದಕ್ಷಿಣ ಕನ್ನಡ- ಮಾಣಿ ಪೊಲೀಸ್ ಠಾಣೆ
ದಕ್ಷಿಣ ಕನ್ನಡ- ಸಜಿಪನಡು ಪೊಲೀಸ್ ಠಾಣೆ
ಬೆಂಗಳೂರು ಗ್ರಾಮಾಂತರ- ದೊಡ್ಡಬಳ್ಳಾಪುರ ಸಂಚಾರ ಪೊಲೀಸ್ ಠಾಣೆ
ಬೆಳಗಾವಿ-ಯರಗಟ್ಟಿ ಪೊಲೀಸ್ ಠಾಣೆ
ಯಾದಗಿರಿ- ಕಕ್ಕೇರಾ ಪೊಲೀಸ್ ಠಾಣೆ
ಚಿತ್ರದುರ್ಗ- ಹಿರಿಯೂರು ಸಂಚಾರ ಪೊಲೀಸ್ ಠಾಣೆ
ದಾವಣಗೆರೆ- ಆನಗೋಡು ಪೊಲೀಸ್ ಠಾಣೆ
ಹಾವೇರಿ- ತಿಳುವಳ್ಳಿ ಪೊಲೀಸ್ ಠಾಣೆ
ಮೈಸೂರು- ಉದಯಗಿರಿ ದಕ್ಷಿಣ ಪೊಲೀಸ್ ಠಾಣೆ
ವಿಜಯಪುರ- ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ
ಕೋಲಾರ- ನರಸಾಪುರ ಕೈಗಾರಿಕಾ ವಲಯ ಪೊಲೀಸ್ ಠಾಣೆ
ಚಾಮರಾಜನಗರ- ಗುಂಡ್ಲುಪೇಟೆ ಸಂಚಾರ ಪೊಲೀಸ್ ಠಾಣೆ