ಗಡಿ ಜಿಲ್ಲೆಯಲ್ಲಿ ಠಾಣೆಗಳಿಗೆ ಬೀಗ ಹಾಕೋದೆಷ್ಟು ಸಮಂಜಸ!?

(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)

ಚಾಮರಾಜನಗರ: ಇತ್ತೀಚೆಗಂತೂ ರಾಜ್ಯದಲ್ಲಿ ದರೋಡೆ ಸೇರಿದಂತೆ ಅಪರಾದ ಕೃತ್ಯಗಳು,ಹುಸಿ ಬಾಂಬ್ ಕರೆಗಳು ಹೆಚ್ಚಾಗುತ್ತಲೇ ಇದೆ.ಇಂತಹ ಸಂದರ್ಭದಲ್ಲಿ ಪೊಲೀಸರು ಹೈ ಅಲರ್ಟ್ ಆಗಿರಬೇಕು.ಆದರೆ ಕೆಲವು ಠಾಣೆಗಳಿಗೆ ಬೀಗ ಹಾಕಲಾಗಿದೆ..!

ಹೌದು ಇದು ಸತ್ಯ.ಗಡಿ ಜಿಲ್ಲೆಯ ಕೆಲವು ಠಾಣೆಗಳಿಗೆ ಬೀಗ ಜಡಿಯಲಾಗಿದೆ.

ಗಡಿ ಜಿಲ್ಲೆಯ ಕೆಲ ಠಾಣೆಗಳಿಗೆ, ರಾತ್ರಿ ಸಮಯದಲ್ಲಿ ದೂರುದಾರರು ಬರೊಲ್ಲ ಅಂತ ಗ್ಯಾರಂಟಿ ಮೇಲೋ, ಗಲಾಟೆ ಆದಾಗ ಪ್ರಾಥಮಿಕ ಹಂತದಲ್ಲೆ ಕೆಲ ಸಿಬ್ಬಂದಿ ತಾತ್ಕಲಿಕ ಪರಿಹಾರ ಮಾಡ್ತಾರೆ ಅಂತಾನೊ ಒಟ್ಟಾರೆ ಕೆಲ ಠಾಣೆಗಳಿಗೆ ಬೀಗ ಹಾಕಿರೋದಂತೂ ಸತ್ಯ.

ಠಾಣಾ ಅದಿಕಾರಿಗಳೆ ಠಾಣೆಯ ಗೇಟ್ ಹಾಗೂ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುವ ಪ್ರವೃತ್ತಿ ಏನಾದರೂ ಇದೆಯಾ ಎಂಬ ಅನುಮಾನ ಜನರನ್ನು ಕಾಡುತ್ತಿದೆ‌.

ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಸೆನ್ ಠಾಣೆ ಹಾಗೂ ಮಹಿಳಾ ಠಾಣೆಗಳು ಆಗಾಗ ರಾತ್ರಿ ಸಮಯದಲ್ಲಿ ಬಾಗಿಲು ಹಾಕಲಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿತ್ತು.

ಹಾಗಾಗಿ ೨೬ ರ ರಾತ್ರಿ ೯ ರ ನಂತರ ಬಾಗಿಲಿಗೆ ಬೀಗ ಹಾಕಿದೆ, ೨೭ ರ ರಾತ್ರಿ ಸೆನ್ ಪೊಲಿಸ್ ಠಾಣೆಗೆ ಮುಂಜಾನೆ ೮ ರ ಸಮಯದಲ್ಲೂ ಗೇಟ್ ಹಾಗೂ ಠಾಣೆಯ ಬಾಗಿಲಿಗೆ ಬೀಗ ಹಾಕಲಾಗಿದೆ.

ಸೆನ್ ಪೊಲೀಸ್ ಠಾಣೆಯು ಇತ್ತೀಚೆಗಷ್ಟೇ ಮೈಸೂರು ಸೆನ್ ಎಸ್ಪಿ ಅವರ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದರೂ ಸದ್ಯಕ್ಕೆ ಚಾಮರಾಜನಗರ ಎಸ್ಪಿ ಅವರ ವ್ಯಾಪ್ತಿಗೆ ಬರೊಲ್ಲ ಅಂತ ನಿರ್ದರಿಸಿಕೊಂಡು ಅದಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನ ಮಹಿಳಾ ಠಾಣೆಯವರೂ ಕೂಡಾ ಠಾಣೆಗೆ ರಾತ್ರಿ ಸಮಯದಲ್ಲಿ ಯಾರು ಬಂದಾರು ಅಂತ ನಿರ್ದರಿಸಿಕೊಂಡು ಬೀಗ ಹೋಗಿ ಬಿಡ್ತಾರೆ.

ದೂರುಗಳು ಬಂದಾಗ ಹೊರಗೆ ಹೋಗಿದ್ದೆವು ಊಟಕ್ಕೆ ಹೊಗಿದ್ದೆವು ಅಂತಾನೊ ಏನೋ
ಒಂದು ನೆಪ ಹೇಳಿ ನುಣುಚಿಕೊಳ್ತಾರೆ.

ಹಿಂದೊಮ್ಮೆ ನ್ಯಾಯಾದೀಶರೊಬ್ಬರು ಸೆನ್ ಠಾಣೆಗೆ ದಿಡೀರ್ ಭೇಟಿ ನೀಡಿದಾಗ ಬೀಗ ಹಾಕಿದ್ದಕ್ಕೆ ಕಾರಣ ಕೇಳಿದಾಗ ಕ್ಷುಲ್ಲಕ ಕಾರಣ ನೀಡಿದ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಒಬ್ಬರು ಅಮಾನತ್ತಾಗಿದ್ದರು.

ದಿನದ ೨೪ ಗಂಟೆ ಕಾರ್ಯನಿರ್ವಹಣೆ ಮಾಡುವ ಇಲಾಖೆ ಎಂದು ಪೊಲೀಸ್ ಇಲಾಖೆ ಹೇಳಲ್ಪಟ್ಟರೂ, ಯಾರಾದರೊಬ್ಬ ಸಿಬ್ಬಂದಿ ಇರಬೇಕು ಎಂಬ ನಿಯಮ ಇದ್ದರೂ
ಇದೆಲ್ಲ ಗಡಿ ಜಿಲ್ಲಾ ಠಾಣೆಗಳಿಗೆ ಅನ್ವಯ ಆಗೋಲ್ಲವೇನೊ‌ ಅನಿಸುತ್ತಿದೆ.

ಹಿಂದೊಮ್ಮೆ ಸೆನ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದ ವಾಹನ ಕಳ್ಳತನವಾದಾಗ ಪತ್ತೆ ಹಚ್ಚುತ್ತಿದ್ದರು ಅಥವಾ ಶಿಸ್ತಿನ ಕ್ರಮ ಜರುಸಿಗ್ತಾ ಇದ್ದರು.

ಕೆಲವು ಠಾಣೆಗಳಲ್ಲಿ ಕೆಲ ಸಿಬ್ಬಂದಿ ವರ್ಗಾವಣೆ ಆದರೂ ಹೋಗದೆ ಇರುವ ಸಂಗತಿಗಳು, ವರ್ಗಾವಣೆ ಆದರೂ ಆಯಾ ಠಾಣೆಗಳಲ್ಲೇ ಕರ್ತವ್ಯ ನಿರ್ವಹಣೆ ಮಾಡದ ಆರೋಪಗಳು ಕೇಳಿ ಬರುತ್ತಿವೆ.

ಒಟ್ಟಾರೆ ಡಿಜಿಪಿ ಸಲೀಂ ಅವರು ಠಾಣೆಗಳಿಗೆ ಬೀಗ ಜಡಿದಿರುವುದು ಸೇರಿದಂತೆ ಇದೆಲ್ಲದರ ಬಗ್ಗೆ ಸಂಬಂಧಿಸಿದ ಅದಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಕ್ರಮವಹಿಸುವ ಅತ್ಯಗತ್ಯವಿದೆ. ಇಲ್ಲವಾದರೆ ರಕ್ಷಣಾ ಠಾಣೆಗಳು ಎಂಬ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಮಾಯ ಆಗಬಹುದು.