ಮೈಸೂರು: ಮೈಸೂರು ನಗರ ಸ್ವಚ್ಛತೆಯಲ್ಲಿ ನಂಬರ್ ಒನ್ ಆಗಲು ಎಲ್ಲಾ ಹೋಟೆಲ್ ಮಾಲೀಕರ ಸಹಕಾರ, ಸಹಭಾಗಿತ್ವ ಅಗತ್ಯವಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸೀಫ್ ಹೇಳಿದರು.
ನಗರದ ಪ್ರೆಸಿಡೆಂಡ್ ಹೋಟೆಲ್ ನಲ್ಲಿ ಹೋಟೆಲ್ ಮಾಲೀಕರ ಸಂಘ
ಆಯೋಜಿಸಿದ್ದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಸ್ವಚ್ಛ ನಗರಿಯಲ್ಲಿ ಮೈಸೂರು ನಂಬರ್ ಒನ್ ಆಗುವ ದಿಸೆಯಲ್ಲಿ ನಡೆಯುತ್ತಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಹೋಟೆಲ್ ಮಾಲೀಕರು ಭಾಗವಹಿಸಬೇಕು ಎಂದು ಕರೆ ನೀಡಿದರು.
ನಿಮ್ಮ ಹೋಟೆಲ್ ಗೆ ಬರುವ ಗ್ರಾಹಕರಿಗೂ ಸಹ ಇದರಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು,ಈ ದಿಸೆಯಲ್ಲಿ ಹೋಟೆಲ್ ಉದ್ಯಮಕ್ಕೆ ಪಾಲಿಕೆಯಿಂದ ಯಾವುದೇ ವಿಧವಾದ ಸಹಕಾರ ನೀಡಲು ಸಿದ್ದ ಎಂದು ಶೇಕ್ ತನ್ವೀರ್ ಆಸೀಫ್ ಭರವಸೆ ನೀಡಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಈಗಾಗಲೇ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅನಧಿಕೃತ ರಸ್ತೆ ಬದಿ ವ್ಯಾಪಾರಿಗಳ ತೆರವು ಕಾರ್ಯ ಆಗಬೇಕು,ಜತೆಗೆ ಈಗಾಗಲೇ ನಗರಕ್ಕೆ ಮನೆ ಮನೆಗೆ ಅನಿಲ ವಿತರಣೆ ಪೈಪ್ ಲೈನ್ ವ್ಯವಸ್ಥೆ ಬಂದಿದೆ.ಅದನ್ನು ಇಡೀ ನಗರಕ್ಕೂ ವಿಸ್ತರಿಸುವ ಕೆಲಸ ಆಗಬೇಕು ಈ ದಿಸೆಯಲ್ಲಿ ಪಾಲಿಕೆ ಅನುಮೋದನೆ ನೀಡಲಿ ಎಂದು ಸಲಹೆ ನೀಡಿದರು.
ಸಂಘ ಸಂಸ್ಥೆ ಒಕ್ಕೂಟದ ಅದ್ಯಕ್ಷ ಪ್ರಶಾಂತ್ ಮಾತನಾಡಿ, ಟ್ರಾವಲ್‌ಮಾರ್ಟ್ 2026 ಈ ಬಾರಿ ಆಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸುವ ಮೂಲಕ ಸಾಂಸ್ಕೃತಿಕ ಸೌಂದರ್ಯದೊಂದಿಗೆ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಹೋಟೆಲ್ ಮಾಲೀಕರ ಪತ್ತಿನ ದರ್ಮಧತ್ತಿ ಅಧ್ಯಕ್ಷ ರವಿಶಾಸ್ತ್ರಿ, ಉಪಾಧ್ಯಕ್ಷ ಸುರೇಶ್, ಸುಬ್ರಹ್ಮಣ್ಯ ತಂತ್ರಿ,
ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್, ಥಿಂಕ್ ಪೈಪ್ ಲೈನ್ ಗ್ಯಾಸ್ ವಲಯ ಮುಖ್ಯಸ್ಥ ಬ್ರಿಜೇಶ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಹೆಬ್ಬಾಳ್, ಕೂರ್ಗಳ್ಳಿ, ದಟ್ಟಗಳ್ಳಿ, ರಾಮಕೃಷ್ಣ ವೃತ್ತ ಸೇರಿ ನಗರದಲ್ಲಿ 240 ಕಿ.ಮೀ. ವ್ಯಾಪ್ತಿ ಪಿಎನ್ ಜಿ ಪೈಪ್ ಲೈನ್ ಗ್ಯಾಸ್ ಸಂಪರ್ಕ 5ಸಾವಿರ ಮನೆಗಳಿಗೆ, 100 ಮಂದಿ ಹೋಟೆಲ್ ಮಾಲೀಕರು ನೊಂದಣಿಯಾಗಿ 22 ಹೋಟೆಲ್ ಹಾಗೂ 42 ಕೈಗಾರಿಕೆಗಳು ಪೈಪ್ ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಪಿಎನ್ ಜಿ ಗ್ಯಾಸ್ ಕಂಪನಿ ಪ್ರೊಜೆಕ್ಟ್ ರ್ ಮ್ಯಾನೇಜರ್ ಶಂಭುಲಿಂಗ ತಿಳಿಸಿದರು.

