ಮಡಿಕೇರಿ: ಕೊಡಗು ಜಿಲ್ಲೆಯ ಅತ್ಯುನ್ನತ ಶಿಖರ ತಾಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಗೆ ಹೊರಟಿದ್ದ ಶರಣ್ಯ ಎಂಬವರು ನಾಪತ್ತೆಯಾಗಿದ್ದಾರೆ.
ಯವಕಪಾಡಿ ಗ್ರಾಮದ ಖಾಸಗಿ ಹೋಮ್‌ಸ್ಟೇಯಲ್ಲಿ ತಂಗಿದ್ದ ಶರಣ್ಯ ಅವರು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿ ಒಬ್ಬರೇ ತಾಡಿಯಂಡಮೋಳ್ ಶಿಖರಕ್ಕೆ ಟ್ರೆಕ್ಕಿಂಗ್‌ಗೆ ಹೊರಟಿದ್ದರು.
ಪ್ರದೇಶದಲ್ಲಿ ಕಾಡಾನೆ ಮತ್ತು ಹಾವುಗಳ ಅಪಾಯವಿರುವುದರಿಂದ ಇತರ ಪ್ರವಾಸಿಗರ ಜೊತೆಯಲ್ಲಿ ಅವರನ್ನು ಕಳುಹಿಸಲಾಗಿತ್ತು.
ಆದರೆ ಇತರ ಪ್ರವಾಸಿಗರು ಬೆಟ್ಟದಿಂದ ವಾಪಸಾಗಿ ಬಂದರೂ ಶರಣ್ಯ ಅವರು ಹಿಂದಿರುಗಿಲ್ಲ.ಈ ವಿಷಯ ಗಮನಕ್ಕೆ ಬಂದ ಕೂಡಲೇ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಡಿಯಾರ ಮುತ್ತಪ್ಪ ಎಂಬ ಸ್ಥಳೀಯರು ಪೊಲೀಸರಿಗೆ ತಿಳಿಸಿದ ನಂತರ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಬೆಟ್ಟದ ಪ್ರದೇಶದಲ್ಲಿ ಶರಣ್ಯಾ ಗಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ.ಶರಣ್ಯ ಅವರ ಮೊಬೈಲ್ ಫೋನ್ ಕೇರಳ ನೆಟ್‌ವರ್ಕ್‌ನಲ್ಲಿ ಸಿಗುತ್ತಿದೆ ಎಂದು ಮೂಲಗಳು ತಿಳಿಸಿವೆ.

