ಖರ್ಗೆಗೆ ಹುಚ್ಚು ಹಿಡಿದಿದೆ-ಪ್ರತಾಪ್ ಸಿಂಹ ಕಿಡಿ

ಮೈಸೂರು: ಆರ್ ಎಸ್ ಎಸ್ ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದು ಖರ್ಗೆಗೆ ಹುಚ್ಚು ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆರ್ ಎಸ್ ಎಸ್ ಬಗ್ಗೆ ಮಾತನಾಡಲಿಲ್ಲ ಅಂದರೆ ತಿಂದ ಅನ್ನ ಜೀರ್ಣ ಆಗುವುದಿಲ್ಲ ಎಂದು ಟೀಕಿಸಿದರು.

ಒಂದು ರಾಷ್ಟೀಯ ಪಕ್ಷದ ಅಧ್ಯಕ್ಷರಾಗಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ,ಆರ್ ಎಸ್ ಎಸ್ ಕೊಲ್ಲಿ ಎಂದು ದೇಶದಲ್ಲಿರುವ ಮುಸಲ್ಮಾನರಿಗೆ ಪ್ರಚೋದನೆ ಮಾಡ್ತಾರಲ್ಲ ಏನಿದರ ಅರ್ಥ ಎಂದು ಕಾರವಾಗಿ ಪ್ರಶ್ನಿಸಿದರು.

ದೇಶದಲ್ಲಿ ನೀವು ಕೋಮು ಗಲಭೆ ಸೃಷ್ಟಿ ಮಾಡುತ್ತಿದ್ದೀರಾ. ಆರ್ ಎಸ್ ಎಸ್ ಬಿಜೆಪಿಯನ್ನ ವಿಷಸರ್ಪಕ್ಕೆ ಹೋಲಿಸಿದ್ದೀರಿ, ಅದನ್ನ ಅಧಿಕಾರಕ್ಕೆ ತಂದಿದ್ದು ಹಿಂದೂಗಳೇ. ನೀವು ಹಿಂದೂಗಳನ್ನ ವಿಷ ಸರ್ಪ ಅಂತ ಹೇಳಿದ್ದೀರಾ. ನೀವು ಮುಸ್ಲಿಂ ಲೀಗ್ ನ ಅಧ್ಯಕ್ಷರ ತರ ಮಾತನಾಡುತ್ತಿದ್ದೀರಾ. ನಿಮ್ಮ ಬಾಯಲ್ಲಿ ಇಂಥಹ ಮಾತುಗಳು ಬರಬಾರದು ಎಂದು ವ್ಯಂಗ್ಯವಾಗಿ ದಲಹೆ ನೀಡಿದರು ‌

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವ್ರು ಮಾತ್ರ ಮುಸ್ಲಿಂ ಓಲೈಕೆ ಮಾಡಿಕೊಳ್ಳಲು ಮಾತನಾಡುತ್ತಾರೆ ಅಂದುಕೊಂಡಿದ್ದೆ,ಆದ್ರೆ ನೀವು ಎಗ್ಗಿಲ್ಲದೆ ಮಾತನಾಡುತ್ತಿದ್ದೀರಾ. ನಿಮಗೆ ಹೋಲಿಸಿದರೆ ಸಿದ್ದರಾಮಯ್ಯ ನವರೇ ಪರವಾಗಿಲ್ಲ ಎಂದು ಪ್ರತಾಪ್‌ ಸಿಂಹ ಹೇಳಿದರು.

ನಿಮ್ಮ ಮೇಲೆ ನಿಮಗೆ ನಾಚಿಕೆ ಆಗಬೇಕು. ದೇಶದ ಭದ್ರತೆ ಮರೆತು ಮುಸಲ್ಮಾನರನ್ನ ಪ್ರಚೋದಿಸುತ್ತಿ ದ್ದೀರಾ. ನೀವು 21ನೇ ಶತಮಾನದ ಮೊಹಮದ್ ಅಲಿ ಜಿನ್ನಾ ಅಂದ್ರೆ ತಪ್ಪಾಗಲಾರದು ಎಂದು ಕುಟುಕಿದರು.