ಮಂಡ್ಯ: ಬೇಸಿಗೆ ಆರಂಭದಲ್ಲೇ ಕೆಆರ್‌ಎಸ್ ನೀರಿನ ಮಟ್ಟ 99 ಅಡಿಗೆ ಕುಸಿದಿದ್ದು,ಜೀವಜಲವನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕಿದೆ.
ರಾಜ್ಯದಲ್ಲಿ ಮುಂಗಾರು ಮಳೆ ತಡವಾದರೆ ಬೆಂಗಳೂರು ಮಾತ್ರವಲ್ಲದೇ ಕಾವೇರಿ ನೀರನ್ನು ಅವಲಂಬಿಸಿರುವ ಜನರಿಗೆ ನೀರಿನ ಸಮಸ್ಯೆ ಎದುರಾಗುವ ಆತಂಕ ವಿದೆ.
ಜಲಾಶಯದ ಇಂದಿನ ನೀರಿನ ಮಟ್ಟ 99 ಅಡಿಗೆ ತಲುಪಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ. ಜಲಾಶಯದ ಇಂದಿನ ಒಳಹರಿವು 66 ಕ್ಯೂಸೆಕ್ಸ್ ಇದ್ದು, ಜಲಾಶಯದ ಹೊರಹರಿವು 4,033 ಕ್ಯೂಸೆಕ್ಸ್ ಇದೆ.
ಇನ್ನು ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರೂ ಕೂಡ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳಿಗೆ ಕಟ್ಟು ಪದ್ಧತಿಯಂತೆ ನೀರು ನೀಡಲಾಗುತ್ತಿರುವುದು ಸಮಾಧಾದ ವಿಷಯ.

