ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಇಂದು ನಡೆದ ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಸಚಿವರ ಜೊತೆ ಸಿದ್ದರಾಮಯ್ಯ ಇಂದು ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದರು.
ಸಭೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಘೋಷಿಸುತ್ತಿದ್ದಂತೆ ಆಪ್ತ ಸಚಿವರು ಭಾವುಕರಾದರು.
ನಂತರ ಸಿದ್ದರಾಮಯ್ಯ, ನಾನು ಇಲ್ಲೇ ಇರಬೇಕು ಅಂದ್ಕೊಂಡು ಇದ್ದೀನಿ. ರಾಷ್ಟ್ರ ರಾಜಕಾರಣ ನನಗೆ ಇಷ್ಟ ಇಲ್ಲ, ನಾನು ಬೇಡ ಅಂದಿದ್ದೇನೆ. ಇಲ್ಲೇ ಇದ್ದುಕೊಂಡು ಸಹಕಾರ ಕೊಡ್ತೀನಿ. ಗ್ಯಾರಂಟಿಗಳನ್ನ ಕಷ್ಟಪಟ್ಟು ಅನುಷ್ಠಾನ ಮಾಡಿದ್ದೀವಿ, ಮುಂದುವರಿಸೋಣ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

