ಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್ ಬಾಬು ಅವರ ನೇತೃತ್ವದಲ್ಲಿ ಚಾಮುಂಡಿ ತಾಯಿ ಪ್ರಸಾದ ನೀಡಲಾಯಿತು.
ಬೆಂಗಳೂರಿನ ಸದಾಶಿವ ನಗರದ ಗೃಹ ಕಚೇರಿಗೆ ಭೇಟಿ ನೀಡಿದ ಜಿ. ಶ್ರೀನಾಥ್ ಬಾಬು ಅವರು,ನಾಡದೇವತೆ ಶ್ರೀ ಚಾಮುಂಡೇಶ್ವರಿ ಬೆಟ್ಟದ ಅಮ್ಮನವರ ಪ್ರಸಾದ ಕುಂಕುಮ ಮತ್ತು ಶ್ರೀರಕ್ಷೆ ಯನ್ನ ನೀಡಿ ವಿಶೇಷ ಪೂಜೆಯ ಹರಕೆಯನ್ನ ತೀರಿಸಿದ ಖುಷಿಯನ್ನ ತಿಳಿಸಿದರು.
ಈ ವೇಳೆ ಜಿ. ಶ್ರೀನಾಥ್ ಬಾಬು ಅವರು ಮಾತನಾಡಿ, ವಿದ್ಯಾರ್ಥಿ ಹೋರಾಟದ ದಿನಗಳಿಂದ ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದ ವರೆಗೂ ಡಿ.ಕೆ.ಶಿವಕುಮಾರ್ ಅವರು ನಾಡದೇವತೆ ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಮೈಸೂರಿನ ಅಳಿಯರಾದ ಡಿ.ಕೆ. ಶಿವಕುಮಾರ್ ಅವರಿಗೆ ಸಾಹಿತ್ಯ ಸಾಂಸ್ಕೃತಿಕ ಪರಂಪರೆ ಪ್ರವಾಸೋದ್ಯಮ ಹಳೆ ಮೈಸೂರು ಭಾಗದ ಮೇಲೆ ಅಪಾರವಾದ ಅಭಿಮಾನ ಪ್ರೀತಿಯಿದೆ ಎಂದು ಜಿ.ಶ್ರೀನಾಥ್ ಬಾಬು ತಿಳಿಸಿದರು.

