ಬೆಂಗಳೂರು: ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐದೂ ಅರ್ಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.
ಮೈತ್ರಿ ಅಭ್ಯರ್ಥಿ ಜೆಡಿಎಸ್ ನ ಗೋವಿಂದರಾಜು ಸೋಲನುಭವಿಸಿದರೆ ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕ್ರಾಸ್ ವೋಟಿಂಗ್ ನಿಂದಾಗಿ ಕಾಂಗ್ರೆಸ್ ಐದನೇ ಅಭ್ಯರ್ಥಿ ವಿನಯ್ ಕಾರ್ತೀಕ್ ಹೆಚ್ಚು ಮತಗಳಿಂದ ವಿಜಯ ಸಾಧಿಸಿದ್ದಾರೆ.
ಕಂಗ್ರೆಸ್ ನಾಲ್ಕು ಅಭ್ಯರ್ಥಿಗಳು ಆ ಪಕ್ಷದ ಸದಸ್ಯರೇ ಸಾಕಷ್ಟು ಇದ್ದುದರಿಂದ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ.ಆದರೆ ಐದನೆ ಅಭ್ಯರ್ಥಿ ಗೆಲುವು ಕಷ್ಟವಾಗಿತ್ತು.
ಜೆಡಿಎಸ್ ಮತ್ತು ಬಿಜೆಪಿಯಿಂದ ಅಡ್ಡ ಮತದಾನ ನಡೆದ ಪರಿಣಾಮ ಕಾಂಗ್ರೆಸ್ ನ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಉಳಿದ ಎಲ್ಲಾ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದು ಗೆಲುವು ಪಡೆದಿದ್ದಾರೆ.
ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ ವಿ ಮೋಹನ್, ವಿನಯ್ ಕಾರ್ತಿಕ್, ಶಿವಣ್ಣ ಮಳವಳ್ಳಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ವಿಜಯಶಾಲಿಗಳಿದ್ದಾರೆ.
ಬಿಕೆ ಪರಿಪ್ರಸಾದ್ – 30
ತಿಪ್ಪಣ್ಣಪ್ಪ ಕಾಮಕನೂರ್ – 30
ಪಿ ವಿ ಮೋಹನ್ – 29
ಆರ್ ರಘು – 29
ಶಿವಣ್ಣ ಮಳವಳ್ಳಿ – 30
ಗೋವಿಂದ ರಾಜು – 14
ವಿನಯ್ ಕಾರ್ತಿಕ್ – 32
ಲಿಂಗರಾಜ್ ಪಾಟೀಲ್ – 27 ಇವರಿಗೂ 28 ಅಗತ್ಯವಿದೆ.ಇದನ್ನ ಹೇಗೆ ತೀರ್ಮಾನುಸುತ್ತಾರೆ ಕಾದು ನೋಡಬೇಕಿದೆ.
ಜೆಡಿಎಸ್ ಹಾಗೂ ಬಿಜೆಪಿಯ ಮತಗಳು ಕಾಂಗ್ರೆಸ್ ಪಾಲಾಗಿವೆ. ಹೀಗಾಗಿಯೇ, 4 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದ ಕಾಂಗ್ರೆಸ್ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್‌ನ ಗೆಲ್ಲಿಸಿಕೊಂಡಿದೆ.
ಗೆಲುವಿಗೆ 28 ಮತಗಳ ಅಗತ್ಯವಿತ್ತು.
ವಿಧಾನಸಭೆಯ ಒಟ್ಟು 224 ಸ್ಥಾನಗಳ ಪೈಕಿ ಸದ್ಯ 222 ಸದಸ್ಯರಿದ್ದಾರೆ. ಮಾಜಿ ಸಚಿವ ಡಿ.ಸುಧಾಕರ್ ನಿಧನ ಹಾಗೂ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅನರ್ಹತೆಯಿಂದ 2 ಸ್ಥಾನಗಳು ತೆರವಾಗಿದ್ದವು.
ಅಭ್ಯರ್ಥಿಯ ಗೆಲುವಿಗೆ ಮೊದಲ ಪ್ರಾಶಸ್ತ್ಯದಡಿ 28 ಮತಗಳ ಅಗತ್ಯವಿತ್ತು. ಗುರುವಾರ ಬೆಳಗ್ಗೆ 9ರಿಂದ ಸಂಜೆ 4 ವರೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಿತು. ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಿತು.

