ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಜೆಡಿಎಸ್ ರಾಜಕಾರಣ-ಡಾ. ಯತೀಂದ್ರ ಆರೋಪ

ಮೈಸೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ
ಜೆಡಿಎಸ್ ರಾಜಕಾರಣ ಮಾಡುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಆರೋಪಿಸಿದರು.

ಮೈಸೂರಿನಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಟೌನ್ ಶಿಫ್ ಮಾಡುವ ಅವಶ್ಯಕವಿದೆ,ಶೇ. 80 ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ,ಕೆಲವರು ಹೆಚ್ಚಿನ ಪರಿಹಾರಕ್ಕೆ ಒಪ್ಪಿದ್ದಾರೆ,ಆದರೆ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ,ಅಂತವರ ಮಾತನ್ನು ಕೇಳಿ ಯೋಜನೆ ಕೈ ಬಿಡಲು ಆಗುವುದಿಲ್ಲ ‌ಎಂದು ಹೇಳಿದರು.

ಬೆಂಗಳೂರಿನಲ್ಲಿ ಜನಸಂದಣಿ ಹೆಚ್ಚಾಗಿದೆ.
ಎಷ್ಟೋ ಜನರಿಗೆ ನಿವೇಶನದ ಅಗತ್ಯ ಇದೆ.
ಬೆಂಗಳೂರು ಜನಸಂಖ್ಯೆಯನ್ನ ಚದುರಿಸುವ ಅಗತ್ಯವಿದೆ,ಹಾಗಾಗಿ ಬೆಂಗಳೂರು ವಿಸ್ತರಿಸುವ ಅವಶ್ಯಕತೆ ಇದೆ,ನಾವು
ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡುತ್ತೇವೆ ಎಂದು ಡಾ.ಯತೀಂದ್ರ ಸ್ಪಷ್ಟಪಡಿಸಿದರು.

ಇದೇ ವೇಳೆ‌ ನಿನ್ನೆ ಫಾಕ್ಸ್ ಡೆಕ್ ಪಬ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು,ಯಾವುದೇ ಲೈಸನ್ಸ್ ಇಲ್ಲದೆ ಪಬ್ ನಡೆಯುತ್ತಿತ್ತು,ಲೈಸನ್ಸ್ ಇಲ್ಲದೆ ಬಾರ್ ನಡೆಸುತ್ತಿದ್ದರೂ ಅಬಕಾರಿ ಡಿಸಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಬಕಾರಿ ಡಿಸಿ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ,ಪಬ್ ಮಾಲೀಕನ ವಿರುದ್ಧವೂ ದೂರು ದಾಖಲು ಮಾಡಲಾಗಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮೈಸೂರಿನಲ್ಲಿ ಅನೇಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಲೈಸನ್ಸ್ ಪಡೆಯದೆ ನಡೆಸುತ್ತಿರುವುದು ಗೊತ್ತಾಗಿದೆ,ಈ ಬಗ್ಗೆ
ಅಬಕಾರಿ ಡಿಸಿಗೆ ಸೂಚನೆ ಕೊಟ್ಟಿದ್ದು,
ಎಲ್ಲೆಲ್ಲಿ ಅಕ್ರಮ ಹಾಗೂ ಲೈಸನ್ಸ್ ಇಲ್ಲದೆ ಬಾರ್ ರೆಸ್ಟೋರೆಂಟ್ ನಡೆಯುತ್ತಿವೆಯೊ ಅವುಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಡಾ.ಯತೀಂದ್ರ ತಿಳಿಸಿದರು.

ಪೊಲೀಸರಿಗೂ ಎಲ್ಲ ಕಡೆ ಪರಿಶೀಲನೆ ನಡೆಸಿ ಎಂದು ಸೂಚಿಸಿದ್ದು, ಮೈಸೂರಿನ ಎಲ್ಲ ಕಮರ್ಷಿಯಲ್ ಕಟ್ಟಡಗಳಲ್ಲಿ ಫೈರ್ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಂಡಿರುವ ಕುರಿತು ಪರಿಶೀಲನೆ ನಡೆಸಲು ಹೇಳಿದ್ದೇನೆ.
ಇಂತಹ ಘಟನೆ ಮರುಕಳಿಸದಂತೆ ಈಗಿನಿಂದಲೇ ಕ್ರಮ ವಹಿಸುವಂತೆ ಸೂಚಿಸಿರುವುದಾಗಿ ಸಚಿವರು ಕಡಕ್ಕಾಗಿ ಹೇಳಿದರು.

ಟೌನ್ ಶಿಫ್ ಮಾಡುವುದು ಅತ್ಯವಶ್ಯಕ,ಶೇ. 80 ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ
ಹೆಚ್ಚಿನ ಮಟ್ಟದ ಪರಿಹಾರಕ್ಕೆ ಒಪ್ಪಿದ್ದಾರೆ,ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ
ಇದರಲ್ಲಿ ಜೆಡಿಎಸ್ ರಾಜಕಾರಣ ಮಾಡುತ್ತಿದೆ.

ಬಿಡದಿ ಟೌನ್ ಶಿಪ್ ಗೆ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರ ಮಾತನ್ನು ಕೇಳಿ ಯೋಜನೆ ಕೈ ಬಿಡಲು ಆಗಲ್ಲ.

ಬೆಂಗಳೂರು ಜನಸಂದಣಿ ಹೆಚ್ಚಾಗಿದೆ.
ಎಷ್ಟೋ ಜನರಿಗೆ ನಿವೇಶನದ ಅಗತ್ಯ ಇದೆ.
ಬೆಂಗಳೂರು ಜನಸಂಖ್ಯೆ ಸ್ಪ್ರೆಡ್ ಆಗಬೇಕಿದೆ.
ಬೆಂಗಳೂರು ವಿಸ್ತರಣೆಯ ಅವಶ್ಯಕತೆ ಇದೆ.
ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡುತ್ತೇವೆ.