ಪ್ರಜ್ವಲ್‌ ಬಳಿ ಜೈಲಲ್ಲಿ ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ‌ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮೊದಲನೆ ಕ್ರಮವಾಗಿ, ವಿಐಪಿ ಸೆಲ್‌ನಿಂದ ಪ್ರಜ್ವಲ್‌ ರನ್ನ ಜನರಲ್‌ ಕೈದಿಗಳಿರುವ ಸೆಲ್‌ಗೆ ಕಳುಹಿಸಲಾಗಿದೆ.

20 ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್‌ ರೇವಣ್ಣನನ್ನ ಶಿಫ್ಟ್‌ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲಿ ಸುಮಾರು 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ಹಾಗೇ ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್ ಸಹ ಸಿಕ್ಕಿದೆ. ಜೈಲಿನಲ್ಲಿ ಸಿಕ್ಕ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ.

ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ಜೈಲು ಸಮವಸ್ತ್ರವಿಲ್ಲದೇ ಆರಾಮವಾಗಿ ಬಣ್ಣದ ಬಟ್ಟೆ‌ ಧರಿಸಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದ‌ ವಿಡಿಯೊ ಈಗ‌ ವೈರಲ್ ಆಗಿದೆ.

ಆದರೆ,ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.