ಮೈಸೂರು: ಕೇವಲ ಮೊಬೈಲ್ ತೆಗೆದುಕೊಂಡಿದ್ದಕ್ಕೆ ಯುಜಿಡಿ ಕೆಲಸಗಾರನನ್ನು ಮತಗತೊಬ್ಬ ಕೆಲಸಗಾರ ಕೊಲೆ ಮಾಡಿದ್ದು,ಆರೋಪಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಯು ಕೊಲೆ ಮಾಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ ಆರೋಪಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಶ್ರೀನಿವಾಸ ಆಲಿಯಾಸ್ ಸಣ್ಣಪುಟ್ಟ ಕೊಲೆ ಮಾಡಿದ ಆರೋಪಿ.
ಬಸವಲಿಂಗ ಕೊಲೆಯಾದ ದುರ್ದೈವಿ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
1-1-2024 ರಂದು ಬಸವಲಿಂಗ ಹಾಗೂ ಗೋಪಾಲಶೆಟ್ಟಿ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿ ರಾಮನಹುಂಡಿ ಗ್ರಾಮದ ಪಕ್ಕದಲ್ಲಿರುವ ಶಂಕರ್ ನಗರದ ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿದ ಹೊಸ ಲೇಔಟ್‌ನ ಬೇಲದ ಮರದ ಸಮೀಪ ಇರುವ ಯು.ಜಿ.ಡಿ ಗುಂಡಿಯ ಬಳಿ ಹಾಜರಾಗಿ ಹಗಲು ಕರ್ತವ್ಯದಲ್ಲಿದ್ದ ಮಾದಪ್ಪನನ್ನು ರಿಲೀವ್ ಮಾಡಿದ್ದರು.
ನಂತರ ಬಸವಲಿಂಗನು ಅದೇ ರಸ್ತೆಯ ಅರ್ಧ ಕಿ.ಮೀ. ದೂರದಲ್ಲಿದ್ದ ಆರೋಪಿ ಶ್ರೀನಿವಾಸ್ ಹಾಗೂ ಪುಟ್ಟಸ್ವಾಮಿ ಅವರು ಕರ್ತವ್ಯದಲ್ಲಿದ್ದ ಯು.ಜಿ.ಡಿ ಸಮೀಪದ ಸ್ಥಳಕ್ಕೆ ಬಂದಿದ್ದರು. ಆರೋಪಿ ಶ್ರೀನಿವಾಸನು ಬಹಿರ್ದೆಸೆಗೆ ಹೋಗಿದ್ದನ್ನು ನೋಡಿ ಸೆಕ್ಯೂರಿಟಿ ರೂಮಿನಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಚಾರ್ಜ್‌ಗೆ ಹಾಕಿದ್ದ ಶ್ರೀನಿವಾಸನ ಮೊಬೈಲ್ ಫೋನ್ ಅನ್ನು ಬಸವಲಿಂಗನು ತೆಗೆದುಕೊಂಡು ಹೋಗಿದ್ದ.
ಈ ವಿಷಯ ಆರೋಪಿ ಶ್ರೀನಿವಾಸನಿಗೆ ಗೊತ್ತಾಗಿ ಬಸವಲಿಂಗ ಟ್ರೇಲರ್‌ನ ಕೆಳಗೆ ಮಲಗಿದ್ದಾಗ ಆತನನ್ನು ಎಳೆದು ಏಕಾಏಕಿ ಹಲ್ಲೆ ಮಾಡಿ ನನ್ನ ಮೊಬೈಲ್ ತೆಗೆದುಕೊಂಡಿದ್ದು ಅಲ್ಲದೇ ಸುಳ್ಳು ಹೇಳುತ್ತಿದ್ದೀಯ ನಿನ್ನ ಮುಗಿಸ್ತೀನಿ ಎಂದು ಕೊಲೆ ಮಾಡುವ ಉದ್ದೇಶದಿಂದಲೇ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದು ನೋವುಂಟು ಮಾಡಿದ ಪರಿಣಾಮ ಬಸವಲಿಂಗ ಅಸ್ವಸ್ಥಗೊಂಡ.
ಆತನನ್ನು ಚಿಕಿತ್ಸೆಗಾಗಿ 9-2-1-2024 ರಂದು ಮೈಸೂರಿನ ಭಾನವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಸವಲಿಂಗನು ಹೊಟ್ಟೆಯ ಒಳಭಾಗಕ್ಕೆ ಉಂಟಾದ ಹಲ್ಲೆಯಿಂದ ಗುಣಮುಖರಾಗದೆ ಅದೇ ದಿನ ಮಧ್ಯರಾತ್ರಿ 12 ಗಂಟೆಯಲ್ಲಿ ಮೃತಪಟ್ಟಿದ್ದ.
ಇದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿತನ ವಿರುದ್ಧ ಜಯಪುರ ಪೊಲೀಸರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನ್ಯಾಯಾಧೀಶರಾದ ಪಿ.ಜೆ.ಸೋಮಶೇಖರ ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ರುಜುವಾತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿ ಶ್ರೀನಿವಾಸ ಆಲಿಯಾಸ್ ಸಣ್ಣಪುಟ್ಟನಿಗೆ 4 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ
ಅಲ್ಲದೆ ಆರೋಪಿಗೆ 6 ತಿಂಗಳ ಸಾದಾ ಶಿಕ್ಷೆ ಮತ್ತು 500 ರೂ ದಂಡ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಭಿಯೋಜಕರಾದ ಎ.ಎನ್.ಮಧು ಅವರು ಸರ್ಕಾರದ ಪರ ವಾದ ಮಂಡಿಸಿದರು

