ಚಾಮರಾಜನಗರ: ಕುಖ್ಯಾತ ಮನೆಗಳವು ಕಳ್ಳನನ್ನು ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು,ಚಿನ್ನಾಭರಣಗಳನ್ನು ವಶಪಡಿಸಿಕೊಂಡಿ ದ್ದಾರೆ.
ಗುಂಡ್ಲುಪೇಟೆ ನಿವಾಸಿ ಈಶ್ವರ @ ಈಶ @ ಶಿವ (38)ಬಂಧಿತ ಆರೋಪಿ.

ಜುಲೈ 14 ರಂದು ಚಂದನ ಎಂಬವರು ಗುಂಡ್ಲುಪೇಟೆ ಠಾಣೆಗೆ ಹಾಜರಾಗಿ ನಮ್ಮ ಕುಟುಂಬದವರು ಜು 6 ರಂದು ಕಾಶಿ ಯಾತ್ರೆಗೆ ಹೋಗಿ 14 ರಂದು ವಾಪಸ್ಸು ಬಂದು ನೋಡಿದಾಗ, ಯಾರೋ ಕಳ್ಳರು ಮನೆ ಬಾಗಿಲು ಮುರಿದು ಬೀರುವಿನಲ್ಲಿ ಇಟ್ಟಿದ್ದ 15.200 ಗ್ರಾಂ ಒಂದು ಚಿನ್ನದ ಚೈನ್, 12.600ಗ್ರಾಂ ಒಂದು ಜೊತೆ ಚಿನ್ನದ ಜುಮುಕಿ, 2 ಗ್ರಾಂ ಒಂದು ಜೊತೆ ಜುಮುಕಿ, 1 ಗ್ರಾಂ ಒಂದು ಜೊತೆ ಪ್ಯಾನ್ಸಿ ಓಲೆ, 2 ಗ್ರಾಂ ಒಂದು ಜೊತೆ ಚಿನ್ನದ ಡ್ರಾಪ್ಸ್, ಒಟ್ಟಾರೆ 32 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ವಾಗಿದೆ ಎಂದು ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮುತ್ತುರಾಜ್ ಎಂ.ಅವರ ನಿರ್ದೇಶನದ ಮೇರೆಗೆ ಅಪರ ಪೊಲೀಸ್ ಅಧೀಕ್ಷಕರಾದ ಎಂ.ಎನ್. ಶಶಿಧರ್ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರಾದಸ್ನೇಹರಾಜ್.ಎನ್ ಅವರ ನೇತೃತ್ವದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪಿಐ ಎನ್.ಜಯಕುಮಾರ್, ನರೇಶ್ ಕುಮಾರ್, ಪಿ.ಎಸ್. ಐ, ಶಿವಕುಮಾರ.ಪಿ ಮತ್ತು ಸಿಬ್ಬಂದಿ ಸುಕೇಶ, ಸುನಿಲ್, ನಾಗಮ್ಮ ಮತ್ತು ಜಿಲ್ಲಾ ಸಿ.ಡಿ.ಆರ್ ವಿಭಾಗದ ವೆಂಕ ಟೇಶ್, ಎಎಸ್‌ಐ ಮತ್ತು ಶಂಕರ್‌ರಾಜ್ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿತ್ತು.
ನಿನ್ನೆ ಈ ಪ್ರಕರಣದ ಆರೋಪಿ ಈಶ್ವರ @ ಈಶ @ ಶಿವ ನನ್ನು ಬಂಧಿಸಿ ಆತನಿಂದ 3.50,000 ರೂ ಮೌಲ್ಯದ
32 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳ ಲಾಗಿದೆ
ಈ ಪತ್ತೆ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ ಮುತ್ತು ರಾಜು.ಎಂ ಅವರು ಪ್ರಶಂಸನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಕಳ್ಳತನ ಪ್ರಕ ರಣಗಳನ್ನು ಪತ್ತೆ ಹಚ್ಚುವಂತೆ ಸೂಚನೆ ನೀಡಿದ್ದಾರೆ.

