ಹೆಚ್ ಡಿ ಕೆ ಗೆ ಟಾಂಗ್ ನೀಡಿದ ಸಿಎಂ ಡಿಕೆಶಿ

ಮೈಸೂರು: ಯಾರು,ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟರೆ ಎಲ್ಲವೂ ಬಯಲಾಗುತ್ತದೆ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ ಶಿವಕುಮಾರ್
ಡಿ.ಕೆ ವಿಧಾನಸೌದ ಮಾರುತ್ತಾರೆ ಎಂಬ
ಎಚ್.ಡಿ ಕೆ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿ,ನಾನು ಸದ್ಯಕ್ಕೆ ಆ ತಂಟೆಗೆ ಹೋಗುವುದಿಲ್ಲ,ಕುಮಾರಸ್ವಾಮಿ ಅವರಿಗೆ ಬಾಯಿ ಚಪಲ,ಚಪಲಕ್ಕೆ ಮಾತನಾಡಿ ಖುಷಿ ಪಡಲಿ ಬಿಡಿ ಎಂದು ಹೇಳಿದರು.

ನನ್ನ ಬಗ್ಗೆ ಟೀಕೆ ಮಾಡಲಿ,
ಅಸೂಹೆಗೆ ಮದ್ದಿಲ್ಲ, ನಾನು ಸಿಎಂ ಆಗಿರುವುದು ಕೆಲವರಿಗೆ ಅಸೂಹೆ ತಂದಿದೆ,
ಕುಮಾರಸ್ವಾಮಿ ಮಾತ್ರ ಅಲ್ಲ ಬಿಜೆಪಿಗೆ ಜೊತೆಗೆ ಎನ್ ಡಿ ಎ ನ ಇಡೀ ಕೂಟಕ್ಕೆ ನಾನು ಸಿಎಂ ಆಗಿರುವುದು ಸಹಿಸಲು ಸಾಧ್ಯವಿಲ್ಲ.
ಹೀಗಾಗಿ ಏನೇನೊ ಮಾತನಾಡುತ್ತಿದ್ದಾರೆ ಮಾತನಾಡಲಿ ಎಂದು ಕುಟುಕಿದರು.

ಆದರೆ ಒಂದು ಸತ್ಯ ಟೀಕೆಗಳು ಸಾಯುತ್ತವೆ.
ಮಾಡಿದ ಕೆಲಸ ಉಳಿಯುತ್ತದೆ.
ಇದನ್ನ ನಂಬಿದವನು ನಾನು ಎಂದು ಸಿಎಂ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ ಶಿವಕುಮಾರ್

ಈ ಬಾರಿ ವಿಭಿನ್ನವಾದ ದಸರಾ ಮಾಡುತ್ತೇವೆ‌.
ದಸರಾದ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ.
ಮಿಲಿಟರಿ, ಸೇನಾ ಪಡೆ ಮೆರವಣಿಗೆಯಲ್ಲಿ ಬರಲಿದ್ದಾರೆ.ಕನ್ನಡದ ಚಿತ್ರ ನಟ ನಟಿಯರು ಕೂಡ ಮೆರವಣಿಗೆಯಲ್ಲಿ ಸಾಗಲಿದ್ದಾರೆ.
ಒಂದೇ ಪ್ರಕಾರದ ಐದು ಜನಪಾದ ಕಲಾವಿದರಿಗೆ ಈ ಬಾರಿ ಅವಕಾಶ ಇಲ್ಲ.
ಬದಲಾದ ಕಾಲಕ್ಕೆ ತಕ್ಕಂತೆ ಮೆರವಣಿಗೆಯ ರೂಪವನ್ನ ಬದಲಾಯಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ ಶಿ ಉತ್ತರಿಸಿದರು.

ದಸರಾ ಕಂಬಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,ಕಂಬಳವನ್ನ ನಾನು ಪ್ರತಿಷ್ಟೆಯಾಗಿ ತೆಗೆದುಕೊಂಡಿಲ್ಲ,ಇನ್ನೂ ಕಂಬಳದ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ,
ಪರಿಸರ ಹಾನಿ ಎಂಬುದೆಲ್ಲಾ ಸುಮ್ಮನೆ ನೆಪ.
ಯಾವ ಪರಿಸರ ಹಾನಿಯೂ ಆಗುವುದಿಲ್ಲ, ನೀರು ಕೂಡ ಹೆಚ್ಚಾಗಿ ಬೇಕಾಗಿಲ್ಲ.
ಸುಮ್ಮನೆ ಕೆಲವರು ವಿರೋಧ ಮಾಡುತ್ತಿದ್ದಾರೆ.
ನಾನು ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಕಡಕ್ಕಾಗಿ ಹೇಳಿದರು.

ದಸರಾ ಉದ್ಘಾಟಕರ ವಿಚಾರ‌ದ
ಬಗ್ಗೆ ಹಲವರ ಜೊತೆ ಚರ್ಚೆ ಮಾಡಿದ್ದೇನೆ.
ಅಂತಿಮ ನಿರ್ಣಯ ನಾನೇ ಮಾಡುತ್ತೇನೆ ಎಂದು ತಿಳಿಸಿದರು.

ಬರದ ನೆಪದಲ್ಲಿ ದಸರಾವನ್ನ ಸರಳ ಮಾಡಲು ಸಾಧ್ಯ ಇಲ್ಲ.
ನನ್ನ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ
ದಸರಾ ಅದ್ದೂರಿಯಾಗಿ ಮಾಡುತ್ತೇನೆ.
ಅದರಲ್ಲಿ ಬದಲಾವಣೆ ಪ್ರಶ್ನೆ ಇಲ್ಲ.
ದಸರಾದ ಮೇಲೆ ಇಡೀ ಪ್ರವಾಸೋದ್ಯಮ ನಿಂತಿದೆ.ಸರಳ ದಸರಾ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.

ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್,
ಬಿಜೆಪಿಗರು ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನ ಬಲಿ ತೆಗೆದುಕೊಂಡರು.
ಯಾವ ತಪ್ಪು ಮಾಡದೆ ಇದ್ದರೂ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ.
ಅವರಿಗೆ ರಾಜಕೀಯ ಬೇಕು.
ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.
ನನ್ನ ಒಂದೇ ಒಂದು ಪ್ರಶ್ನೆಗೆ ಬಿಜೆಪಿಯವರು ಉತ್ತರ ಕೊಡಲಿಲ್ಲ.
ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಿದರು ಎಂಬುದನ್ನ ಬಿಜೆಪಿಯವರು ಉತ್ತರಿಸಲಿ ಎಂದು ಒತ್ತಾಯಿಸಿದರು.