ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಾರ್ಯಾಲಯ ಉದ್ಘಾಟನೆ

ಮೈಸೂರು: ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯವನ್ನು ಸಚಿವ ಡಾ. ಯತೀಂದ್ರ ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸಾರ್ವಜನಿಕ ರ ಕುಂದುಕೊರತೆಗಳ ಶೀಘ್ರ ಪರಿಹಾರ ಹಾಗೂ ವಿವಿಧ ಇಲಾಖೆಗಳ ಆಡಳಿತಾತ್ಮಕ ಕಾರ್ಯಗಳಿಗೆ ವೇಗ ನೀಡು ವ ಉದ್ದೇಶದಿಂದ ನೂತನ ಕಾರ್ಯಾಲಯವನ್ನು ತೆರೆ ಯಲಾಗಿದೆ ಎಂದು ಈ‌ ವೇಳೆ ಸಚಿವರು ತಿಳಿಸಿದರು.

ಈ ನೂತನ ಕಾರ್ಯಾಲಯದ ಪ್ರಾರಂಭದಿಂದಾಗಿ ಜಿಲ್ಲೆಯ ನಾಗರಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಲು ಸುಲಭವಾಗ ಲಿದ್ದು, ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಿ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಳ್ಳಲಿವೆ ಎಂದು ಡಾ.ಯತೀಂದ್ರ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾ ಯಣ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಶಿವಕುಮಾರ್,ಮೈಸೂರು ಜಿಲ್ಲಾ ಗ್ರಾಮಾಂ ತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೀರಿ ಹುಂಡಿ ಬಸವಣ್ಣ, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ ಗಳು ಅಭಿಮಾನಿಗಳು ಹಾಜರಿದ್ದರು.