ಚಾಮರಾಜನಗರ: ಮನೆಯ ಹೆಂಚು ತೆಗೆದು ಒಳನುಗ್ಗಿ ಮನೆಯಲ್ಲಿಟ್ಟಿದ್ದ ಒಟ್ಟು 1,49,000 ಮೌಲ್ಯದ 25.5 ಗ್ರಾಂ ಚಿನ್ನದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳನನ್ನು
ಚಾಮರಾಜನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಡ್ಡಲ್ ಪುರ ಗ್ರಾಮದ ವಾಸ ಪ್ರದೀಪ ಬಂಧಿತ ಆರೋಪಿ.
ಸೆಪ್ಟೆಂಬರ್ 12 ರಂದು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವಡ್ಗಲ್‌ಪುರ ಗ್ರಾಮದ ವಾಸಿ ಭಾಗ್ಯ ಎಂಬಾಕೆ ಹಾಜರಾಗಿ ಯಾರೋ ಕಳ್ಳರು ನಮ್ಮ ಮನೆಯ ಹೆಂಚು ತೆಗೆದು ಒಳಪ್ರವೇಶಿಸಿ ಮನೆಯಲ್ಲಿಟ್ಟಿದ್ದ ಒಟ್ಟು ರೂ.1,49,000 ಮೌಲ್ಯದ 25.5 ಗ್ರಾಂ ಚಿನ್ನದ ಆಭರಣವನ್ನು ಕಳ್ಳತನ ಮಾಡಿದ್ದಾರೆಂದು ದೂರು ನೀಡಿದ್ದರು.
ಆರೋಪಿ ಪತ್ತೆ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು., ಎಂ. ಅವರ ನಿರ್ದೇಶನದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಶಿಧರ್ ಎಂ.ಎನ್. ಡಿವೈಎಸ್‌ಪಿ ಸ್ನೇಹರಾಜ್.ಎನ್ ಅವರ ಮಾರ್ಗದರ್ಶನ ದಲ್ಲಿ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ಶೇಷಾದ್ರಿ, ಪಿಎಸ್‌ಐ., ಸೀಗಯ್ಯ, ಹಾಗೂ ಸಿಬ್ಬಂದಿಗಳಾದ ಸಂತೋಷ, ಮಹೇಶ್,ವಿಶ್ವನಾಥ್, ಅಶೋಕ ಇವರುಗಳ ನೇತೃತ್ವದ ತಂಡ ರಚಿಸಲಾಗಿತ್ತು.
ಅ.6 ರಂದು ಆರೋಪಿ ಪ್ರದೀಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕಳ್ಳತನ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.
ಪೊಲೀಸರು ಆರೋಪಿಯಿಂದ ಒಟ್ಟು 1,49,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿ ಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಈ ಕಳವು ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ.ಅವರು ಪ್ರಶಂಸನೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಕಳುವು ಪ್ರಕರಣಗಳನ್ನು ಪತ್ತೆಹಚ್ಚುವಂತೆ ಸೂಚನೆಗಳನ್ನು ನೀಡಿದ್ದಾರೆ.

