ಕುಮಾರಸ್ವಾಮಿಯವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ -ಸಿಎಂ ಡಿ.ಕೆ.ಶಿ

ನವದೆಹಲಿ: ಕೇಂದ್ರ ಸಚಿವ ಕುಮಾರಸ್ವಾಮಿ ಯವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ದೆಹಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು‌.

ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಸ್ಟಿಂಗ್ ಆಪರೇಷನ್ ಹಿಂದೆಯೂ ನೀವೇ ಇದ್ದೀರಿ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ಬಹಳ ಸಂತೋಷ. ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಲವೇ ಉತ್ತರಿಸಲಿದೆ. ಅವರು ಹೇಳಿದಂತೆ ಅದೇನು ದಾಖಲೆಗಳಿವೆಯೋ ಅದನ್ನು ತರಿಸಿ ಅವರಿಗೆ ತಿಳಿಸು ತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ ಎಂದು ತಿರುಗೇಟು ನೀಡಿದರು.