ಸಂಜೆ ವೇಳೆ ಮೆಸೇಜ್ ಬರುತ್ತೆ –ಸಿಎಂ ಯಡಿಯೂರಪ್ಪ

ಬೆಳಗಾವಿ: ಇಂದು ಸಂಜೆ ವೇಳೆಗೆ ದೆಹಲಿ ಹೈಕಮಾಂಡ್ ಏನು ಮೆಸೇಜ್ ಕೊಡುತ್ತಾರೆ ನೊಡೋಣ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.

ಬೆಳಗಾವಿ ಮಳೆ ಹಾನಿ ವೀಕ್ಷಿಸಲು ಭಾನುವಾರ ಜಿಲ್ಲೆಗೆ ಆಗಮಿಸಿದ ಸಿಎಂ ಬಿ. ಎಸ್. ಯಡಿಯೂರಪ್ಪ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ದೆಹಲಿ ಹೈಕಮಾಂಡ್ ಸಂದೇಶ ನನಗೂ ಮತ್ತು ಮಾಧ್ಯಮಗಳಿಗೂ ಏಕಕಾಲಕ್ಕೆ ಇಂದು ಸಂಜೆ ಗೊತ್ತಾಗುತ್ತದೆ ಬಿಡಿ ಎಂಬಿಎಸ್ ವೈ ಹೇಳಿದರು.

ಎರಡು ವರ್ಷದ ತಮ್ಮ ಸಿಎಂ ಅವಧಿ ತಮಗೆ ತೃಪ್ತಿ ತಂದಿದೆಯಾ ಎಂಬ ಪ್ರಶ್ನೆಗೆ, ರಾಜ್ಯದ ಮಾಧ್ಯಮಗಳಿಗೆ ನನ್ನ ಕಾರ್ಯವೈಖರಿ ಬಗ್ಗೆ ಸಂತೃಪ್ತಿ ಇದ್ದರೆ ನನಗೂ ಸಂತೃಪ್ತಿ ಸಿಕ್ಕ ಹಾಗೆಯೇ ಎಂದು ತಿಳಿಸಿದರು.

ದಲಿತ ಅಭ್ಯರ್ಥಿಯೊಬ್ಬರನ್ನು ರಾಜ್ಯದಲ್ಲಿ ತಮ್ಮ ತರುವಾಯ ಮುಖ್ಯಮಂತ್ರಿ ಮಾಡುವಿರಾ ಎಂಬ ಪ್ರಶ್ನೆಗೆ ಯಾರು ಮತ್ತು ಯಾವ ಸಮುದಾಯದವರು ಮುಖ್ಯಮಂತ್ರಿ ಆಗಬೇಕು ಎಂಬುವುದನ್ನು ಸ್ವತಃ ದೆಹಲಿ ಹೈಕಮಾಂಡ್ ನಿರ್ಧರಿಸುತ್ತಾರೆ ಎಂದು ಸಿಎಂ ಹೇಳಿದರು.

ಸಿಎಂ ಬಿಎಸ್ ವೈ ಅವರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.