ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಹಲವಾರು ತಿಂಗಳುಗಳಿಂದ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳು ಸೋಮವಾರದಿಂದ ಪುನರಾರಂಭಗೊಂಡಿದೆ.
ಇಂದಿನಿಂದ ಮತ್ತೆ ಶಾಲಾ-ಕಾಲೇಜು ಆರಂಭವಾಗಿರುವುದು ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ನವ ಚೈತನ್ಯ ಮೂಡಿದೆ.
ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳು ಇಂದಿನಿಂದ ಆರಂಭವಾಗಿದ್ದು, ತಿಂಗಳಾನು ಗಟ್ಟಲೆ ಮನೆಯಲ್ಲೇ ಕುಳಿತು ಆನ್ ಲೈನ್ ಪಾಠದಿಂದ ಜಿಡ್ಡುಗಟ್ಟಿದ ವಿದ್ಯಾರ್ಥಿಗಳ ಹೃನ್ಮನಸ್ಸಿಗೆ ಶಾಲೆ ಆರಂಭ ಒಂದು ರೀತಿಯಲ್ಲಿ ನವ ಚೈತನ್ಯ ನೀಡಿದಂತಾಗಿದೆ.
ಕಳೆದ ವರ್ಷ ಕೂಡ ಪರಿಪೂರ್ಣವಾಗಿ ಶಾಲೆಗೆ ಬರಲು ಸಾಧ್ಯವಾಗದೆ ಆನ್ ಲೈನ್ ನಲ್ಲಿ ಹೇಳಿಕೊಡುವ ಪಾಠಗಳು ಸರಿಯಾಗಿ ಅರ್ಥವಾಗದೆ ಅದೆಷ್ಟೊ ವಿದ್ಯಾರ್ಥಿಗಳು ಪೂರ್ಣ ಶಿಕ್ಷಣದಿಂದ ವಂಚಿತರಾಗಿದ್ದರು.
ಕೆಲವು ಶಾಲೆಗಳಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಇನ್ನು ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರತಿ ಮಾಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು.
ಸರ್ಕಾರದ ಆದೇಶ ತರಗತಿಯನ್ನು ನಡೆಸಲಾಗುತ್ತಿದೆ. ಶನಿವಾರವೇ ಶಾಲೆ ಕಾಲೇಜಿನ ಎಲ್ಲ ಕೋಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
ಎಲ್ಲ ಶಾಲೆ-ಪದವಿಪೂರ್ವ ಕಾಲೇಜುಗಳಲ್ಲಿಯೂ ಪ್ರತಿಯೊಬ್ಬರನ್ನೂ ಟೆಸ್ಟ್ ಮಾಡಿ, ಥರ್ಮಲ್ ಸ್ಕ್ಯಾನ್ ಮಾಡಿ ಒಳಗಡೆ ಬಿಡಲಾಗುತ್ತಿದೆ. ಎಲ್ಲ ಕೋಣೆಗಳಲ್ಲಿಯೂ ಒಂದು ಬೆಂಚಿಗೆ ಇಬ್ಬರಂತೆ ವಿದ್ಯಾರ್ಥಿಗಳನ್ನು ಕೂರಿಸಲಾಗಿದೆ.
ಸರ್ಕಾರ ಹೇಳಿದಂತೆ 10ರಿಂದ 1ಗಂಟೆಯವರೆಗೆ ನಾಲ್ಕು ಪಿರಿಯಡ್ ಗಳನ್ನು ನಡೆಸಲಾಗುತ್ತಿದೆ. ಈ ನಾಲ್ಕು ಪಿರಿಯಡ್ ಗಳಾದ ನಂತರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.
ವಿದ್ಯಾರ್ಥಿಗಳು ಹೆಚ್ಚಾಗಿ ಶಾಲೆಗೆ ಬಂದಲ್ಲಿ ಆನ್ ಲೈನ್ ಕ್ಲಾಸ್ ಕೇಳಲು ಶಿಕ್ಷಕರು ಸೂಚಿಸಿದ್ದಾರೆ. ಅರ್ಧಮಂದಿ ಆಫ್ ಲೈನ್, ಅರ್ಧ ಮಂದಿ ಆನ್ ಲೈನ್ ಪಾಠ ಕೇಳಲಿಕ್ಕೆ ಎಲ್ಲ ವಿದ್ಯಾರ್ಥಿಗಳಿಗೂ ವಿನಂತಿಸಲಾಗಿದೆ.
ಸರಕಾರದ ಈ ನಿಯಮದಂತೆ ಪೆÇೀಷಕರಿಂದ ಒಪ್ಪಿಗೆ ಪತ್ರ ಕೂಡ ಶಾಲೆಯಲ್ಲಿ ಪಡೆದುಕೊಳ್ಳಲಾಗಿದೆ.

