ಗಣಪತಿ ಪ್ರತಿಷ್ಠಾಪನೆ ಹಿಂದೂ ಧರ್ಮದ ಹಿರಿಮೆ -ಹಿಂದೂ ಮುಖಂಡ ವಿಕಾಸ್ ಶಾಸ್ತ್ರಿ

ಮೈಸೂರು: ಬಲಮುರಿ ಗಣಪತಿ ಯುವಕರ ಸಂಘದ ವತಿಯಿಂದ ನಗರದ ಅರವಿಂದನಗರದಲ್ಲಿ ಶುಕ್ರವಾರ ಗಣಪತಿ ಹಬ್ಬದ ಪ್ರಯುಕ್ತ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ವಿಕಾಸ್ ಶಾಸ್ತ್ರಿ, ಇಡೀ ದೇಶಕ್ಕೆ ಗಣೇಶನ ಹಬ್ಬ ಬಹುದ್ದೊಡ್ಡ ಹಬ್ಬ. ಈ ಹಬ್ಬ ಹಿಂದೂ ಧರ್ಮದ ಹಿರಿಮೆ. ಈ ಹಬ್ಬವನ್ನು ಕೋವಿಡ್ ನಿಯಮಾನುಸಾರ ಪಾಲಿಸಿ ಆಚರಿಸಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆಂದರು.

ನಂತರ ಮಾತನಾಡಿದ ಯುವಮುಖಂಡ ರಾಮ್ ಆರ್ ಗೌಡ, ಈ ದಿನ ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ಪರಿಸರಕ್ಕೆ ಯಾವುದೇ ಹಾನಿ ಮಾಡದೆ ಆಚರಿಸುತ್ತಿರುವುದು ಶ್ಲಾಘನೀಯ. ಕೋವಿಡ್ ಎಂಬ ಮಹಾಮಾರಿ ದೇಶದಿಂದ ತೊಲಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು

ಈ ಸಂಧರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಚೇತನ್, ಮುನ್ನ, ಮಲ್ಲೇಶ್ , ಚಂದ್ರು, ಪುಟ್ಟ, ರವಿ, ಕಿರಣ್, ಶಿವು, ವಿನಯ್, ಸೋಮ, ರಾಜು, ಸಿದ್ದಾಪಾಜಿ, ವರುಣ, ಪ್ರಜ್ವಲ್ ಹಾಗು ಮೂಲ ನಿವಾಸಿಗಳು ಉಪಸ್ಥಿತರಿದ್ದರು.