ಭಾರತೀಯ ಜನತಾ ಪಾರ್ಟಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ಶನಿವಾರ ದಸರಾ ವಸ್ತುಪ್ರದರ್ಶನದ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳಿಗೆ ಖಾದಿ ವಸ್ತ್ರ ವಿತರಿಸಿ, ಖಾದಿ ವಸ್ತ್ರ ಕುರಿತು ಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು: ಯುವಕ-ಯುವತಿಯರು ಖಾದಿ ಯನ್ನು ಬಳಸುವ ಕುರಿತು ಜಾಗೃತಿ ಮೂಡಿಸಬೇಕು. ಖಾದಿ ಬಟ್ಟೆ ಧರಿಸುವುದರಿಂದ ಸ್ವಾತಂತ್ರ್ಯಕ್ಕೆ ಗೌರವ ನೀಡಿದಂತಾಗುತ್ತದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹೇಳಿದರು.
ಭಾರತೀಯ ಜನತಾ ಪಾರ್ಟಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ಶನಿವಾರ ದಸರಾ ವಸ್ತುಪ್ರದರ್ಶನದ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳಿಗೆ ಖಾದಿ ವಸ್ತ್ರ ವಿತರಿಸಿ, ಖಾದಿ ವಸ್ತ್ರ ಕುರಿತು ಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಸ್ವತಃ ಚರಕದಲ್ಲಿ ನೇಯ್ದ ಖಾದಿಯನ್ನು ಧರಿಸುತ್ತಿದ್ದರು. ವಿದೇಶಿ ಬಟ್ಟೆಗಳ ವ್ಯಾಮೋಹಕ್ಕೆ ಒಳಗಾಗದೆ, ಖಾದಿ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದರು. ಹಾಗೆಯೇ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಬಂದು ಖಾದಿ ಗ್ರಾಮೋದ್ಯೋಗ ವನ್ನು ಪರಿಚಯಿಸಿದರು ಎಂದು ತಿಳಿಸಿದರು.
ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು, ನಾಯಕರು ಗಾಂಧೀಜಿ ಅವರನ್ನು ಕೇವಲ ರಾಜಕೀಯಕ್ಕಾಗಿ ಬಳಸಿಕೊಂಡರು. ಆದರೆ ಗಾಂಧಿ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಗಾಂಧಿ ಪಥದಲ್ಲಿ ನಡೆಯುತ್ತಿರುವ ಏಕೈಕ ರಾಜಕೀಯ ಪಕ್ಷವೆಂದರೆ ಅದು ಬಿಜೆಪಿ ಎಂದರು.
ಬಿಜೆಪಿಯ ವಿದ್ಯಾ ಅರಸು, ಅಪೂರ್ವ ಸುರೇಶ್ ರಾ. ಪರಮೇಶ್ ಗೌಡ ಎಸ್ಕೆ ದಿನೇಶ್, ಪೂರ್ಣಿಮ ಚಂದ್ರಪ್ಪ, ಗೋಕುಲ್ ಗೋವರ್ಧನ, ನವೀನ್, ಪ್ರದೀಪ್ ಕುಮಾರ್, ಕಿರಣ್, ಬೆಳಕು ಮಂಜು, ಲೋಹಿತ್, ಮಧುಸೂದನ್, ಕುಮಾರ್ ಇಟ್ಟಿಗೆಗೂಡು, ಜೈ ಗಣೇಶ್, ಕೃಷ್ಣ, ಸುರೇಂದ್ರ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.