ಅಪ್ಪು ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

ಮೈಸೂರು:ಬೃಹತ್ ರಕ್ತದಾನ‌ ಶಿಬಿರವನ್ನು ಆಯೋಜಿಸಲು ಮುಂದಾದರೆ  ಆರೋಗ್ಯ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ॥ಮೊಹಮ್ಮದ್ ಸಿರಾಜ್ ಅಹ್ಮದ್ ತಿಳಿಸಿದರು.

ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅವರ ಸ್ಮರಣೆಯ ಅಂಗವಾಗಿ  ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮೈಸೂರಿನ  ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ‌ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ಕೋವಿಡ್ ಸಂದರ್ಭದಲ್ಲಿ ರಕ್ತದ ಶೇಖರಣೆ ಕುಸಿದಾಗ  ಜೀವಧಾರ ರಕ್ತನಿಧಿ ಕೇಂದ್ರ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳ ಬಳಗವನ್ನು ಒಗ್ಗೂಡಿಸಿ ಹಲವಾರು ಮಂದಿಯ ಬದುಕಿಗೆ ಆಸರೆಯಾಯಿತು ಎಂದು ಹೇಳಿದರು.

ಆರ್ಥಿಕವಾಗಿ ಅಶಕ್ತರು, ಗರ್ಭಿಣಿಯರಿಗೆ ಮತ್ತು ಅಪಘಾತವಾದವರಿಗೆ ತುರ್ತು ಸಂಧರ್ಭದಲ್ಲಿ ರಕ್ತದ ಅವಶ್ಯಕತೆಯಿದ್ದಾಗ ಮಾನವೀಯತೆಯ ಮನೋಭಾವದಿಂದ ಸಮಸ್ಯೆಗಳನ್ನ ಬಗೆಹರಿಸಿದ್ದಾರೆ ಎಂದು ತಿಳಿಸಿದರು.

ಅದಕ್ಕಾಗಿಯೇ ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜೀವಧಾರ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಇ ಗಿರೀಶ್ ಅವರಿಗೆ ಅತ್ಯುತ್ತಮ ರಕ್ತನಿಧಿ ಕೇಂದ್ರ ಎಂದು ಪ್ರಶಸ್ತಿ  ನೀಡಿ ಅಭಿನಂದಿಸಲಾಗಿದೆ ಎಂದು ಹೇಳಿದರು.

ಜೀವಧಾರ ರಕ್ತನಿಧಿ ಕೇಂದ್ರದ  ನಿರ್ದೇಶಕ ಎಸ್.ಇ ಗಿರೀಶ್  ಮಾತನಾಡಿ ಸಮಾಜದಲ್ಲಿ ಒಬ್ಬ ವ್ಯಕ್ತಿ ಬದುಕಿದ್ದಾಗ ಮಾಡಿದ ಸಮಾಜ ಮುಖಿ  ಪುಣ್ಯದ ಕೆಲಸಗಳನ್ನು ಸ್ಮರಿಸುವ ನಿಟ್ಟಿನಲ್ಲಿ ರಕ್ತದಾನ, ನೇತ್ರದಾನ  ನಡೆಯುತ್ತಿವೆ ಎಂದರೆ ಅದಕ್ಕೆ ಪುನೀತ್ ರಾಜಕುಮಾರ್ ರವರೇ ನಿದರ್ಶನ ಎಂದು ಹೇಳಿದರು.

ಅಪ್ಪು ಅವರು ದೊಡ್ಮನೆ ಹುಡುಗ,ಅವರ ಅಭಿಮಾನಿಗಳು ಮೈಸೂರಿನಲ್ಲಿ ಇದ್ದಾರೆ. ಸಹಸ್ರಾರು ಮಂದಿ ಅಭಿಮಾನಿಗಳು ನಮ್ಮ ಜೀವಧಾರ ರಕ್ತದಾನ ಕೇಂದ್ರದಲ್ಲಿ ರಕ್ತದಾನ ಮಾಡಿದ್ದಾರೆ, ಪುನೀತ್ ರಾಜಕುಮಾರ್ ರವರು ಇಂದಿನ ಯುವಪೀಳಿಗೆಗೆ ಆದರ್ಶವಾಗಿದ್ದಾರೆ ಎಂದು ತಿಳಿಸಿದರು.

ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ಟ್ರಸ್ಟ್ ನ ಅಧ್ಯಕ್ಷ ದೇವೇಂದ್ರ ಪರಿಹಾರಿಯಾ ಮಾತನಾಡಿ

ಎರಡು ಕೈಗಳನ್ನು ಕಳೆದುಕೊಂಡವರು ವಾಹನ ಚಲಿಸುತ್ತಾರೆ. ಅಲ್ಲದೇ ಕೈ ಇಲ್ಲದವರು ಕಾಲಿನ ಮೂಲಕ ಬರೆಯುತ್ತಾರೆ. ಈ ನಿಟ್ಟಿನಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು

ಮುಖ್ಯವಾಗಿ ಎಲ್ಲರಲ್ಲೂ ಕೆಲಸ ಮಾಡುವ ಮನೋಭಾವ ಇರಬೇಕು ಹಾಗಾದಾಗ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.

ರಕ್ತದಾನ ಶಿಬಿರದಲ್ಲಿ ಮುತ್ತಣ್ಣ ,ಡಾ॥ರಾಧಾ, ಯೋಜನಾ ನಿರ್ದೇಶಕ ಆನಂದ್ ಮಂಡೋತ್ ಸಂಚಾಲಕ ಮಹೇಂದರ್ ಚೋಯಲ್,  ಸಹ-ಯೋಜನಾ ನಿರ್ದೇಶಕ ಚಿರಂಜಿಲಾಲ್ ಕುಮಾವತ್, ಸದಸ್ಯರಾದ ಸುಮಾ ಆರ್. ಬಗದಾರಾಮ್ ಕುಮವತ್, ಕೈಲಾಶ್ ರಾಥೋರ್,ಹೇಮಲತಾ, ಪ್ರತಾಪ್, ಮಾಲಿನಿ, ಮಿಸ್ಬಾ ಮತ್ತಿತರರು ಹಾಜರಿದ್ದರು.