ಬೊಮ್ಮಾಯಿ ಬಜೆಟ್ ಜನಪ್ರಿಯವೋ…. ಉಳಿತಾಯವೋ….

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಪತ್ರಕರ್ತರು, ಮರಿಯಮ್ಮನ ಹಳ್ಳಿ

ಇನ್ನೂ ಎರಡೇ ತಿಂಗಳ ಚುನಾವಣೆ ಹೊತ್ತಿನಲ್ಲಿ ಇರುವ  ಕರ್ನಾಟಕದಲ್ಲಿ ಇಂದು  2023- 24 ನೇ ಸಾಲಿನ ಬಜೆಟ್

ನ್ನು ರಾಜ್ಯದ ಮುಖ್ಯಮಂತ್ರಿಗಳು, ಹಣಕಾಸು ಸಚಿವರಾದ  ಬಸವರಾಜ್ ಬೊಮ್ಮಯಿ ರವರು ಅವರು ತಮ್ಮ ಎರಡನೇ ಬಜೆಟ್ ನ್ನು  ಮಂಡನೆ ಮಾಡಲಿದ್ದಾರೆ.

ಇದು ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆಯ ಬಜೆಟ್  ಆಗಿದೆ.

2022-23 ಸಾಲಿನಲ್ಲಿ 2.7 ಲಕ್ಷ ಕೋಟಿ ಆಯವ್ಯಯ ಮಂಡಿಸಿದ್ದ ಸಿಎಂ ಬೊಮ್ಮಾಯಿ ಬಾರಿ 3 ಲಕ್ಷ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡಿಸಲು ತಯಾರಿ ನಡೆಸಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿ ಭಾರಿ ಪ್ರಮಾಣದಲ್ಲಿ ಘೋಷಣೆಯ  ನಿರೀಕ್ಷೆ ಇದೆ. ಇದರ ಜೊತೆಗೆ ಭಾರಿ ತೆರಿಗೆ ಹೊರೆ ಇಲ್ಲದೆ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ

2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದ ಸಂದರ್ಭದಲ್ಲಿ

ಆಹಾರ ಇಲಾಖೆ 2,288 ಕೋಟಿ ರೂಪಾಯಿ ಅನುದಾನ

ವಸತಿ ಇಲಾಖೆ 3,594 ಕೋಟಿ ರೂಪಾಯಿ ಅನುದಾನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4,713 ಕೋಟಿ ಅನುದಾನ

ಕೃಷಿ ಮತ್ತು ತೋಟಗಾರಿಕೆ ಇಲಾಖೆ 8,457 ಕೋಟಿ ರೂ ಅನುದಾನ,

ಸಮಾಜ ಕಲ್ಯಾಣ ಇಲಾಖೆ 9,389 ಕೋಟಿ ರೂ ಅನುದಾನ

ಲೋಕೋಪಯೋಗಿ ಇಲಾಖೆ 10,447 ಕೋಟಿ ರೂ ಅನುದಾನ

ಒಳಾಡಳಿತ ಮತ್ತು ಸಾರಿಗೆ ಇಲಾಖೆ 11,222 ಕೋಟಿ ರೂ ಅನುದಾನ

ಜಲ ಸಂಪನ್ಮೂಲ ಇಲಾಖೆ 20,601 ಕೋಟಿ ರೂ ಅನುದಾನ

ಶಿಕ್ಷಣ ಇಲಾಖೆ 31,980 ಕೋಟಿ ರೂಪಾಯಿ ಅನುದಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 17,325 ಕೋಟಿ ರೂಪಾಯಿ

ನಗರಾಭಿವೃದ್ಧಿ ಇಲಾಖೆ 16,076 ಕೋಟಿ ರೂಪಾಯಿ ಅನುದಾನ

ಕಂದಾಯ ಇಲಾಖೆ 16,388 ಕೋಟಿ ರೂಪಾಯಿ ಅನುದಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 13,982 ಕೋಟಿ ರೂಪಾಯಿ ಅನುದಾನ

ಇಂಧನ ಇಲಾಖೆ 12,655 ಕೋಟಿ ರೂಪಾಯಿ ಅನುದಾನ

ಶಿಕ್ಷಣ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೆಚ್ಚಿನ  ಅನುದಾನವನ್ನು ಘೋಷಣೆ ಮಾಡಿದ್ದರು.

ಕಳೆದ ವರ್ಷ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ಆದಾಯ ಕೊರತೆಯಿತ್ತು. ಬಾರಿ ಈವರೆಗೆ ಬಜೆಟ್ ಗುರಿಗಿಂತ 13 ಸಾವಿರ ಕೋಟಿ ಅಧಿಕವಾಗಿ ಆದಾಯ ಸಂಗ್ರಹ ಮಾಡಲಾಗಿದೆ. 2022-23 ಸಾಲಿನಲ್ಲಿ ಒಟ್ಟು 1,89,887.54 ಕೋಟಿ ರಾಜಸ್ವ ಜಮೆಯ ಅಂದಾಜು ಮಾಡಲಾಗಿದೆ. ಹಣಕಾಸಿನ ಸಂಗ್ರಹ ಉತ್ತಮವಾಗಿದ್ದು ಪರಿಷ್ಕೃತ ರಾಜಸ್ವ ಜಮೆ ಅಂದಾಜು ಮಾರ್ಚ್ ಅಂತ್ಯಕ್ಕೆ ಗುರಿ ಮೀರಲಿದೆ. ಹೀಗಾಗಿ ವರ್ಷ 65,000-70,000 ಕೋಟಿ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಲ ನಿರೀಕ್ಷೆ ಮೀರಿ ಆದಾಯ ಬಂದಿದೆ. ತೆರಿಗೆ ಆದಾಯ ಕೂಡ ನಿರೀಕ್ಷೆ ಮೀರಿ ಸಂಗ್ರಹವಾಗಿದೆ. ಇದರಲ್ಲಿ ಬಹುಪಾಲು ವಾಣಿಜ್ಯ ತೆರಿಗೆ, ಸಾರಿಗೆ (ಮೋಟಾರು ವಾಹನ ತೆರಿಗೆ), ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.

ಕಳೆದ 9 ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ, 60,000 ಕೋಟಿ ರೂಪಾಯಿಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ಮಾರ್ಚ್ ತಿಂಗಳ ಅಂತ್ಯಕ್ಕೆ 70,000 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. 2022-23ನೇ ಸಾಲಿನಲ್ಲಿ 77,010 ಕೋಟಿ ರೂಪಾಯಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಇರಿಸಲಾಗಿತ್ತು.

ಜಿಎಸ್‍ಟಿ ಹಾಗೂ ತೈಲ ಮಾರಾಟ ತೆರಿಗೆ ಮೂಲಕ ರಾಜ್ಯ ಸರ್ಕಾರ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಕಳೆದ ಬಾರಿಗಿಂತ ಬಾರಿ ಮೊದಲ ಆರು ತಿಂಗಳ ಅವಧಿಯಲ್ಲಿ 70,000 ಕೋಟಿ ರೂಪಾಯಿಗೂ ಹೆಚ್ಚಿನ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಆರ್ಥಿಕ ವರ್ಷ 53,220 ಕೋಟಿ ರೂಪಾಯಿ ಜಿಎಸ್‍ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಮೊದಲ ಆರು ತಿಂಗಳ ಅವಧಿಯಲ್ಲಿ 37,211.53 ಕೋಟಿ ರೂಪಾಯಿ ಜಿಎಸ್‍ಟಿ ಸಂಗ್ರಹವಾಗಿದೆ. 2021-22ನೇ ಸಾಲಿನಲ್ಲಿ ಅವಧಿಯಲ್ಲಿ 34,457.71 ಕೋಟಿ ರೂಪಾಯಿ ಜಿಎಸ್‍ಟಿ ಸಂಗ್ರಹವಾಗಿತ್ತು. ವರ್ಷ 2,759.82 ಕೋಟಿ ರೂಪಾಯಿ ಹೆಚ್ಚುವರಿ ಜಿಎಸ್‍ಟಿ ಸಂಗ್ರಹವಾಗಿದೆ. ಹೀಗಾಗಿ ಬಜೆಟ್ ಅಂದಾಜನ್ನು ಮೀರಿ ಬಾರಿ ಜಿಎಸ್‍ಟಿ ಸಂಗ್ರಹವಾಗುವ ವಿಶ್ವಾಸ ಸರ್ಕಾರದ್ದು.

ಇನ್ನು ವರ್ಷಕ್ಕೆ ತೈಲ ಮಾರಾಟ ತೆರಿಗೆ ಸಂಗ್ರಹ 17,640 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮೊದಲ ಆರು ತಿಂಗಳಲ್ಲಿ 9,540.40 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,723.37 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಅಬಕಾರಿ  ಸುಂಕದ ವಿಚಾರಕ್ಕೆ ಬಂದರೆ, ಸಲ 3,000 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗುತ್ತಿದೆ. ಇದು ಚುನಾವಣಾ ವರ್ಷವಾದ ಕಾರಣ ತೆರಿಗೆ ಹೆಚ್ಚಿಸದೇ ಇದ್ದರೂ, ಮದ್ಯ ಬಳಕೆ ಶೇಖಡ 20ರಿಂದ 30 ಹೆಚ್ಚಳವಾಗಿದೆ. ಇದರಿಂದ ತೆರಿಗೆ ಸಂಗ್ರಹ ಹೆಚ್ಚಳದ ಸುಳಿವು ನೀಡಿದೆ.

 ಅಬಕಾರಿ ಇಲಾಖೆಯು ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ ಅಂತ್ಯದ ತನಕ 24,724.27 ಕೋಟಿ ರೂಪಾಯಿ ಅಬಕಾರಿ ಆದಾಯ ಸಂಗ್ರಹವಾಗಿದೆ. ಇದು 29,000 ಕೋಟಿ ರೂಪಾಯಿ ಆದಾಯದ ಗುರಿಯ ಶೇ.85.26 ರಷ್ಟಿದೆ. ಕಳೆದ 2021-22 ಆರ್ಥಿಕ ವರ್ಷ ಅಬಕಾರಿ ಆದಾಯ 21,549.94 ಕೋಟಿ ರೂಪಾಯಿ. ಗುರಿ 24,580 ಕೋಟಿ ರೂಪಾಯಿ ಇತ್ತು .

ದಶಕಗಳಿಂದ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದು, ರೈತಾಪಿ ಸಮುದಾಯವ ಮನಗೆಲ್ಲಲು ನೀರಾವರಿ ಯೋಜನೆಗಳಿಗೆ ಭರಪೂರ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ.

ರಾಷ್ಟ್ರೀಯ ಯೋಜನೆ ಎಂದು ಕರೆಯಲ್ಪಡುವ ಭದ್ರಾ ಮೇಲ್ದಂಡೆ ಯೋಜನೆಗೆ ಇನ್ನಷ್ಟು ಅನುದಾನ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಹೆಚ್ಚಿನ ಅನುದಾನ ಘೋಷಿಸುವ, ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಅನುದಾನ ಮಂಜೂರಾತಿ ಮೂಲಕ ಭಾಗದ ಜನರ ಸೆಳೆಯಲಾಗುತ್ತದೆ.

ಇನ್ನೂ ಜಿಲ್ಲಾವಾರು ಅನೇಕ ಯೋಜನೆಗಳ ಘೋಷಣೆ  ಮತ್ತು ಯುವಕರು, ದುಡಿಯುವ ವರ್ಗ, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಕ್ಕೆ ಬಂಪರ್ ಕೊಡುಗೆ ನೀಡಲಿದ್ದಾರೆ ಎನ್ನಲಾಗಿದೆ.

ಕೋವಿಡ್ ಮತ್ತು ಪ್ರವಾಹದ ಕಾರಣದಿಂದಾಗಿ ಸಂಕಷ್ಟ ಎದುರಿಸುತ್ತಿರುವ ದುಡಿಯುವ ವರ್ಗಕ್ಕೆ ಸಹಾಯ ಹಾಗೂ ಹೆಣ್ಣು ಮಕ್ಕಳಿಗೆ ನೆರವಾಗುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದೆ. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಿಸಲು ಅಗತ್ಯ ಇರುವ ಆರ್ಥಿಕ ನೆರವು ನೀಡುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸುವ ಸಂಭವವಿದೆ.

ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಿದೆಯೇ ಎಂಬುದನ್ನು  ನೋಡಬೇಕಿದೆ.

2023 ಏಪ್ರಿಲ್ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಜನರ ಮತ ಸೆಳೆಯಲು ಜನಪ್ರಿಯ ಘೋಷಣೆ ಮಾಡಲು ಈಗಾಗಲೇ ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ಸಿಎಂ ನಡೆಸಿದ್ದಾರೆ.

ಇದರ ಜೊತೆಗೆ ಬಾರಿ ಗುರಿ ಮೀರಿದ ಆದಾಯ ಸಂಗ್ರಹ ಆಗುತ್ತಿದೆ, ಹಿನ್ನಲೆಯಲ್ಲಿ ಹೊರೆ ಇಲ್ಲದ ಚುನಾವಣೆ ಬಜೆಟ್ ಮಂಡನೆ ಆಗುವ ಎಲ್ಲಾ ಸಾಧ್ಯತೆ ಇದೆ ಮತ್ತು ಬೊಮ್ಮಾಯಿರವರು ಚುನಾವಣೆಯ ಮೇಲೆ ಕಣ್ಣಿಟ್ಟೇ ಬಜೆಟ್ ಮಂಡನೆ ಮಾಡುತ್ತಾರೆ ಎಂದು ವಿಶ್ಲೇಷಕರ ಅಂದಾಜು.

ಬೊಮ್ಮಾಯಿ ರವರು ಬರುವ ಚುನಾವಣೆಯಲ್ಲಿ  ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ತರಲೇ ಬೇಕೆಂಬ ಹಟತೊಟ್ಟಿರುವಂತೆ ಬಜೆಟ್ ಮಂಡನೆ ಮಾಡುತ್ತಾರೊ ಎಂದು  ಕರ್ನಾಟಕದ ಜನತೆಯು ಕುತೂಹಲದಿಂದ ಕಾಯುತ್ತಿರುವುದು ಸತ್ಯ.