ರಾಮ ಭಕ್ತ ಹನುಮ

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

ಹನುಮ ಜಯಂತಿಯ ಪ್ರಯುಕ್ತ ವಿಶೇಷ ಲೇಖನ

ಮನೋಜವಂ ಮಾರುತತುಲ್ಯವೇಗಂ

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|

ವಾತಾತ್ಮಜಂ ವಾನರಯೋಥಮುಖ್ಯಂ

ಶ್ರೀ ರಾಮದೂತಂ ಶರಣಂ ಪ್ರಪದ್ಯೇ ||

ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಪರಮ ಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನವನ್ನು ಹನುಮ ಜಯಂತಿಯನ್ನು ಇಂದು ಆಚರಿಸಲಾಗುತ್ತದೆ.

ಉತ್ತರ ಭಾರತದಲ್ಲಿ ಹನುಮ ಜಯಂತಿಯನ್ನು ಚೈತ್ರ ಪೂರ್ಣಿಮೆಯಂದು ಹನುಮ ಜಯಂತಿ ಆಚರಿಸಿದರೆ, ಕರ್ನಾಟಕದಲ್ಲಿ ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಶ್ರೀ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ

ಕರ್ನಾಟಕದಲ್ಲಿ ದಿನವನ್ನು ಹನುಮಾನ್ ವ್ರತ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.

ಹನುಮನು ಹಿಂದೂ ಧರ್ಮಗ್ರಂಥಗಳಲ್ಲಿ ಪೂಜಿಸುವ ದೈವವಾಗಿದ್ದು, ಭಾರತದ ಮಹಾಕಾವ್ಯ ಎಂದೇ ಹೇಳಲಾಗುವ ರಾಮಾಯಣದಲ್ಲಿ ಪ್ರಮುಖ ಪಾತ್ರಗಳಲ್ಲೊಬ್ಬನಾಗಿದ್ದಾನೆ.

ವಾಯುಪುತ್ರ, ಕಪಿವೀರ, ರಾಮಭಕ್ತ, ಮಾರುತಿ, ಸುಂದರ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ, ಕೇಸರಿ ನಂದನ, ಹನುಮಂತ, ಕೇಸರಿ ನಂದನ ಎಂಬ ನಾನಾ ಹೆಸರಿನಲ್ಲಿ ಕರೆಯಲ್ಪಡುವ ಹನುಮನ ಉಲ್ಲೇಖ ವೈದಿಕ ಸಾಹಿತ್ಯದಲ್ಲೇ ಲಭಿಸುತ್ತದೆ. ಪುರಾಣಗಳಲ್ಲಿ ಅವನು ಕೇಸರಿಯೆಂಬ ವಾನರ ರಾಜನ ಮಡದಿ ಅಂಜನಾದೇಯೆಂಬ ಅಪ್ಸರೆಯಲ್ಲಿ ವಾಯುವಿನ ಅಂಶದಿಂದ ಜನ್ಮ ತಾಳಿದನೆಂದು ಹೇಳಲಾಗಿದೆ.

ಅಂಜನಾ ದೇವಿಯು ಪುಂಜಿಕಸ್ಥಲೆಯೆಂಬ ಅಪ್ಸರೆಯಾಗಿದ್ದಳು. ಹನುಮಂತನ ಕಲ್ಪನೆಯಲ್ಲಿ ಹಾಸುಹೊಕ್ಕಾಗಿರುವ ವಿವರಗಳು ವೇದವಾಙ್ಮಯದಲ್ಲಿ ಹಲವಾರಿವೆ. ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಹನುಮಂತನ ಸ್ವಾರಸ್ಯ ಇಮ್ಮಡಿಸುತ್ತದೆ. ಮಗುವಾಗಿದ್ದಾಗ ಸೂರ್ಯನನ್ನು ಹಿಡಿದು ಬಾಯೊಳಗೆ ಅಡಗಿಸಿಕೊಂಡನೆಂದು ಕತ್ತಲೆ ಉಂಟಾಯಿತು. ಇಂದ್ರನಿಗೆ ರೋಷ ಬಂದು ಅವನ ವಜ್ರಾಯುಧದ ಪ್ರಹಾರದಿಂದ ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು. ಆಚಾರ್ಯ ಮಧ್ವರ ಒಕ್ಕಣೆಯಂತೆ ಹನುಮನೆಂದರೆ ಜ್ಞಾನ ಅಂದರೆ ಬುದ್ಧಿಮತಾಂ ವರಿಷ್ಠ, ಪೂರ್ಣಪ್ರಜ್ಞ. ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ.

ಹನುಮ ಜಯಂತಿಯನ್ನು ಭಾರತ ದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ

ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.

ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ,ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಅಂಜನಾತನಯ, ಆಂಜನೇಯ, ವಾನರ ಶ್ರೇಷ್ಠ. ಕೇಸರಿ ನಂದನ, ಹನುಮಂತ, ರಾಮದೂತ,ದಾಸರಲ್ಲಿ ಶ್ರೇಷ್ಟ. ಭಕ್ತ ಅನಜನೆಯ ಮಾರುತಿ ,ಪವನಪುತ್ರ, ಸುಂದರ, ವಾಯುಪುತ್ರ , ರಾಮಪ್ರಿಯ, ಹನುಮಂತ, ಅಂಜನೇಯ ,ವಾನರಶ್ರೆಷ್ತೆ, ಕೆಸರಿ ನ೦ದನ ಸೂರ್ಯೋದಯ ಆದ ಸಮಯದಲ್ಲಿ ಶ್ರೀರಾಮಚಂದ್ರನ ಸರಮ ಭಕ್ತನಾದ ಹನಮಂತನು ಅವತಾರ ಮಾಡಿದ ದಿನ. ದಿನ ಬಹಳ ಮಹತ್ವದ್ದು.

ಹನುಮಂತನ ತಂದೆ ಕೇಸರಿ ಎಂಬ ಶ್ರೇಷ್ಠ ಕಪಿ, ತಾಯಿ ಅಂಜನಾದೇವಿ, ಒಳ್ಳೆಯ ಸಾಧ್ವಿ. ಅವಳು ಋಷಿಗಳ ಅನುಮತಿಯಿಂದ ಇವನನ್ನು ಪಡೆದಳು, ಆದ್ದರಿಂದ ಇವನಿಗೆ ಆಂಜನೇಯ ಎಂದು ಕರೆಯುವುದುಂಟು. ಹನುಮಂತ ದೇವರ ಸ್ಮರಣೆ ನಮಗೆಲ್ಲ ಒಂದು ವಿಶೇಷವಾದ ಶಕ್ತಿಯನ್ನು ತುಂಬಿಕೊಂಡಹಾಗೆ, ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿ. ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಅವನ ಅನೇಕ ವಿಧವಾದ ಶಕ್ತಿಯನ್ನು ನಾವು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ನಮ್ಮ ಜೀವನದಲ್ಲಿ ಎಲ್ಲ ಅವಸ್ಥೆಯಲ್ಲಿಯೂ ಅವನನ್ನು ಸ್ಮರಿಸುವುದು ಅವಶ್ಯಕ. ಶಾಸ್ತ್ರಗಳಲ್ಲಿ ಹನುಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಅನೇಕ ಬಾರಿ ಉಲ್ಲೇಖ ಇದೆ. ಅದರಲ್ಲಿ ಕೆಲವು ರೀತಿಯಾಗಿವೆ:

ಉತ್ತಮ ಬುದ್ಧಿವಂತನಾಗುವುದಕ್ಕೆ, ಶಾರೀರಿಕ ಬಲ ಮತ್ತು ಮಾನಸಿಕ ಬಲ ಇವೆರಡೂ ಬೇಕು, ಅಮ ಸಂಪಾದನೆ ಮಾಡುವುದಕ್ಕೆ, ನಾವು ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರಕುವುದಕ್ಕಾಗಿ ಮತ್ತು ಈಗಿನ ಒಂದು ದಿನದ ಪ್ರತಿ ಹಂತ ಹಂತದಲ್ಲೂ ನಮ್ಮಲ್ಲಿ ಧೈರ್ಯ ಕಡಿಮೆಯಾಗುತ್ತಲಿದೆ (ಅದಕ್ಕೆ ಕಾರಣಗಳು ಅನೇಕ, ಅದನ್ನು ಇಲ್ಲಿ ಮೆಲಕು ಹಾಕುವುದು ಬೇಡ) ಧೈರ್ಯ ಕುಂದದೆ ಇರುವುದಕ್ಕೆ, ಭಯರಹಿತವಾದ ಜೀವನವನ್ನು ಸಾಧಿಸುವುದಕ್ಕೆ, ನಮ್ಮ ನಮ್ಮ ಧರ್ಮವನ್ನು ಆಚರಿಸದೆ ಇರುವುದಕ್ಕೆ ಕಾರಣವಾದ ನಮ್ಮಲ್ಲಿರುವ ಆಲಸ್ಯತನವು ಅದನ್ನು ದೂರ ಮಾಡುವುದಕ್ಕೆ, ಮಾತು ಎಲ್ಲರಿಗೂ ಬೇಕು, ಅದಿಲ್ಲದೆ ಜೀವನ ಬಹಳ ಕಷ್ಟ ಅದರ ಸಂಪಾದನೆಗೂ, ರಾಮನ ಭಕ್ತನಾದ ಹನುಮಂತ, ಆಂಜನೇಯನ ಸ್ಮರಣೆ, ಪ್ರಾರ್ಥನೆ ಇದು ಅತ್ಯಾವಶ್ಯಕ.

ಹುನುಮ ಮಾಲಾ ಧಾರಣೆ: ಶ್ರದ್ಧ ಭಕ್ತಿಯ  ಹನುಮ ಮಾಲಾ ಧಾರಣೆಯು ಯುವ ಸಮೂಹದಲ್ಲಿ ಕಾಣಬಹುದಾಗಿದೆ, ಕರ್ನಾಟಕವಲ್ಲದೆ, ಪಕ್ಕದ ಮಹಾರಾಷ್ಟ್ರ, ಆಂದ್ರಪ್ರದೇಶ, ತೆಲಂಗಾಣ ಉತ್ತರ ಭಾರತದ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಪ್ರತಿವರ್ಷವು  ಯಾವುದೇ ಜಾತಿ ತಾರತಮ್ಯಗಳಿಲ್ಲದೆ  ಲಕ್ಷಕ್ಕೂ ಹೆಚ್ಚಿನ ಹನುಮ ಮಾಲಾಧಾರಿಯಾಗಿ   ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.

ಬರುವುದಕ್ಕಿಂತ ಮುಂಚೆ   14 ದಿನಗಳ ಹನುಮಮಾಲೆ ಹನುಮ ಮಾಲೆ ಧರಿಸಿವ ಕಠಿಣ ವ್ರತ ಕೈಗೊಂಡು ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ರಾಮಧ್ಯಾನವನ್ನೂ ಪವಾಸವನ್ನು ಮಾಡುತ್ತಾರೆ ಮಾಲಾ ವಿಸರ್ಜನೆಯನ್ನು ಹನುಮ ಜಯಂತಿ ಯಂದು ಹನುಮ ಸ್ಮರಣೆ ಮಾಡುತ್ತಾ ಕಿಷ್ಕಿಂಧೆಯ ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಕೈಗೊಂಡು  ಹನುಮಮಾಲೆ ವಿಸರ್ಜನೆ ಮಾಡುತ್ತಾರೆ.

ಬಾರಿಯ ವಿಶೇಷ ಅಂದರೆ ಮಾಲೆ ಧರಿಸುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರಿದ್ದಾರರವಿಜಯಪುರ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ಹನುಮಂತನ ಮಾಲಾ ಧರಿಸಿ ಹನುಮ ಜನ್ಮಭೂಮಿಯಾದ ಅಂಜನಾದ್ರಿ ಬೆಟ್ಟಕ್ಕೆ ಹೊರಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಬಸವೇಶ್ವರ ಹುಟ್ಟಿದ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ಜಾಫರ್ ಬೆಣ್ಣೆ ಎಂಬವವರು ಹನುಮ ಮಾಲಾ ಧಾರಣೆ ಮಾಡಿದ್ದಾರೆ. ಹಣೆಗೆ ಗಂಧ, ತಿಲಕ ಇರಿಸಿ, ಕೇಸರಿ ವಸ್ತ್ರ ಧರಿಸಿ, ಕೊರಳಲ್ಲಿ ಹನುಮನ ಮಾಲಾ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್, ಜಾತಿಗಿಂತ ಭಾವೈಕ್ಯತೆ ದೊಡ್ಡದು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ.ಇನ್ನೂ ಹನುಮಮಾಲಾಧಾರಿಗಳಿಗೆ ತೊಂದರೆ ಆಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ,ರಾತ್ರಿಯೇ ಹುಲಿಗಿ ದೇವಸ್ಧಾನಕ್ಕೆ ಬರಲಿರೋ ಬೆಳಗಾವಿ ಜಿಲ್ಲೆ ಭಕ್ತರಿಗೆ ಸುಮಾರು 40 ಸಾವಿರ ಮಾಲಾಧಾರಿಗಳಿಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಹನುಮ ಭಕ್ತರನ್ನು ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಲಿದ್ದಾರೆ. ಗಂಗಾವತಿ ( gangavathi ) ನಗರದ ಮೂಲಕವೂ ಅಂಜನಾದ್ರಿ ಬೆಟ್ಟಕ್ಕೆ ಬರಲಿರೋ ಮಾಲಾಧಾರಿಗಳು. ಕಿಷ್ಕಿಂಧಾ ಅಂಜನಾದ್ರಿ  ಬೆಟ್ಟದಲ್ಲಿ ಜರುಗಲಿರುವ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ ಕ್ರಮಕ್ಕೆ ಜಿಲ್ಲಾಡಳಿತ ,ತಾಲೂಕ ಆಡಳಿತ ಕಿಷ್ಕಿಂಧಾ ಅಂಜನಾದ್ರಿ ಗೆ ಮಾಲಾ ವಿಸರ್ಜನೆಗೆ ಆಗಮಿಸುವ ಹನುಮ ಭಕ್ತರಿಗೆ ವಿತರಿಸಲು ದೇವಸ್ಥಾನದ ವತಿಯಿಂದ 60ಸಾವಿರ ಪ್ರಸಾದದ ಲಾಡುಗಳು ತಯಾರಿಸಲಾಗಿದೆ. ಜೊತೆಗೆ 1.50 ಲಕ್ಷ ಹನುಮ ಭಕ್ತರಿಗೆ ಡಿ. 4ರಂದು ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನ ಅನ್ನ ಪ್ರಸಾದದ ವ್ಯವಸ್ಥೆ ಯನ್ನು ಬೆಟ್ಟದ ಎಡಭಾಗದಲ್ಲಿರುವ ವೇದಪಾಠಶಾಲೆಯಲ್ಲಿ ಮಾಡಲಾಗಿದೆ. ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಾದ ಲಡ್ಡು ತಯಾರಿಸಲಾಗಿದೆ. ಊಟದ ವ್ಯವಸ್ಥೆಗಾಗಿ 80 ಕ್ವಿಂಟಲ್ ಅಕ್ಕಿ, 500ಕ್ಕೂ ಹೆಚ್ಚು ಊಟ ಬಡಿಸುವ ಅಡಿಗೆ ಮಾಡುವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ . ಅಂಜನಾದ್ರಿ ಸುತ್ತಲೂ ಗ್ರಾಪಂ ಮತ್ತು ಗಂಗಾವತಿ ನಗರಸಭೆಯ ಸಿಬ್ಬಂದಿಗಳಿಂದ ಸ್ವಚ್ಛತಾಕಾರ್ಯ ನಡೆಯುತ್ತಿದೆ. ಶುದ್ಧ ಕುಡಿಯುವ ನೀರು, ಆಸ್ಪತ್ರೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ,ಈಗಾಗಲೇ ಬಂದಿರೋ ಭಕ್ತರಿಗೆ ಅಂಜನಾದ್ರಿ ಬೆಟ್ಟದ ಕೆಳಗೆ ವ್ಯವಸ್ಥೆ ಮಾಡಲಾಗಿದೆ.  

ಹನುಮ ಮಾಲೆಯು ವಯಸ್ಸಿನ  ಬೇಧಭಾವವಿಲ್ಲದೆ ಇಂದು ಕರ್ನಾಟಕದಾದ್ಯಂತ ವಲ್ಲದೆ ದೇಶದೆಲ್ಲಡೆ ಜನಪ್ರಿಯಗೊಳ್ಳುತ್ತಿದೆ.ಹನುಮನ ಜಯಂತಿಯಂದು ಆ ವಾಯುಪುತ್ರನ ನನೆಯುತ್ತಾ  ಸ್ವಾಮಿಯ ಕೃಪೆಗೆ ಪಾತ್ರರಾಗೋಣ.