ನಟ ಚೇತನ್ ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಆ ದಿನಗಳು ಚಿತ್ರದ ಖ್ಯಾತಿಯ ನಟ ಚೇತನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಿಂದುತ್ವದ ಬಗ್ಗೆ ಕೆಟ್ಟದ್ದಾಗಿ ಪೋಸ್ಟ್ ಮಾಡಿದ‌‌ ಹಿನ್ನೆಲೆಯಲ್ಲಿ ಬೆಂಗಳೂರಿನ‌ ಶೇಷಾದ್ರಿಪುರಂ ಠಾಣೆ ಪೊಲೀಸರು ಚೇತನ್‌ ಅವರನ್ನು ಬಂಧಿಸಿದ್ದರು.

ಮಂಗಳವಾರ ನ್ಯಾಯಾಲಯದ ಮುಂದೆ‌ ಈ ನಟನನ್ನು ಪೊಲೀಸರು ಹಾಜರುಪಡಿಸಲಾಯಿತು.

ಬೆಂಗಳೂರಿನ‌ 32ನೆ ಎಸಿಎಂಎಂ ನ್ಯಾಯಾಲಯ ಚೇತನ್ ಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಹಿಂದೂಪರ ಸಂಘಟನೆಗಳು ನೀಡಿದ್ದ ದೂರನ್ನು ಆಧರಿಸಿ ಶೇಷಾದ್ರಿಪುರಂ ಪೊಲೀಸರು ಚೇತನ್ ರನ್ನು ಬಂಧಿಸಿದ್ದರು.