ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ

ನವದೆಹಲಿ: ದಿ ಎಲಿಫಂಟ್ ವಿಸ್ಪರರ್ಸ್​ ಡಾಕ್ಯುಮೆಂಟರಿ ಹಾಗೂ ಆರ್ ಆರ್ ಆರ್ ಚಿತ್ರದ ನಾಟು ನಾಟು..ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ.

ಭಾರತಕ್ಕೆ ಈ ಬಾರಿ ಎರಡು ಆಸ್ಕರ್​ ಅವಾರ್ಡ್ ಬಂದಿದೆ.

ದಿ ಎಲಿಫಂಟ್ ವಿಸ್ಪರರ್ಸ್​ ಡಾಕ್ಯುಮೆಂಟರಿ ಹಾಗೂ ​ಆರ್ ಆರ್ ಆರ್ ಚಿತ್ರದ ನಾಟು ನಾಟು..ಹಾಡು ಪ್ರಶಸ್ತಿ ಗೆದ್ದಿವೆ.

ಆರ್​ಆರ್​ಆರ್​ ಚಿತ್ರದ ನಾಟು ನಾಟು.. ಹಾಡಿಗೆ ಅತ್ಯುತ್ತಮ ಒರಿಜಿನಲ್ ಸಾಂಗ್​ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಸಿಕ್ಕಿದೆ.

ದಿ ಎಲಿಫಂಟ್ ವಿಸ್ಪರರ್ಸ್​ ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.ಹಾಗಾಗು ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದಂತಾಗಿದೆ.