ಹೆಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ರಮೇಶ್ ಬಾಬು ಬಂಡಿಸಿದ್ದೇಗೌಡ ಅನುಮಾನ

ಮಂಡ್ಯ: ಮಾಜಿ ಸಿಎಂ  ಹೆಚ್‌.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡೀಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದರೆ ಸಾಕು ಆಸ್ಪತ್ರೆ ಸೇರ್ತಾರೆ,ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತೆ, ನಾಲ್ಕನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ ಅದು ಹೇಗೆ ಸಾಧ್ಯ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಚಲುವರಾಯಸ್ವಾಮಿಗೆ ಇರುವ ಸೇಮ್ ಕಾಯಿಲೆ ಅವರ ಸ್ನೇಹಿತ ಕುಮಾರಸ್ವಾಮಿಯವರಿಗೂ ಇದೆ,ಆದರೆ ಚಲುವರಾಯಸ್ವಾಮಿ ಆಸ್ಪತ್ರೆ ಸೇರಿದ್ರೆ ಒಂದು ತಿಂಗಳು ಈಚೆಗೆ ಬರಲ್ಲ. ಅದು ಹೇಗೆ ಹಾರ್ಟ್ ಆಪರೇಷನ್ ಮಾಡಿಸಿ ಹೆಚ್ ಡಿ ಕೆ ಎರಡೇ ದಿನಕ್ಕೆ ಆಚೆ ಬರ್ತಾರೆ ಎಂದು ಕೇಳಿದರು.

ಈ ಚುನಾವಣೆ ಅಭಿವೃದ್ದಿ ವರ್ಸಸ್ ಕಣ್ಣೀರಿಡುವ ಜನರ ನಡುವಿನ ಚುನಾವಣೆ. ನನಗೆ ಆ ತೊಂದರೆ ಇದೆ, ಈ ತೊಂದರೆ ಇದೆ ಎಂದರೆ ಕೇಳಬೇಡಿ,ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದ್ರಿ ಎಂದು ಪ್ರಶ್ನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ಕೊಟ್ಟು ಗೆಲ್ಲಿಸಿ ಎಂದು ರಮೇಶ್ ಬಂಡೀಸಿದ್ದೇಗೌಡ ಜನರಲ್ಲಿ ಮನವಿ ಮಾಡಿದರು.