ರಾಜ್ಯದಲ್ಲಿ ಕಾಂಗ್ರೆಸ್ ಗೆ 20ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು -ಸಿಎಂ

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣ ಇದ್ದು

20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ‌ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ‌ ಮತದಾನ ಮಾಡಿದ ಬಳಿಕ  ಮಾಧ್ಯಮದವರೊಂದಿಗೆ ಮಾತಾನಾಡಿದ ಸಿಎಂ,ಮೊದಲ ಹಂತದ 14 ರಲ್ಲಿ ಹೆಚ್ಚು ಸ್ಥಾನವನ್ನ ನಾವೇ ಗೆಲ್ಲುತ್ತೇವೆ‌ ಆದರೆ

ಅದರಲ್ಲಿ ಎಷ್ಟು ಅಂಥ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮೈಸೂರು, ಚಾಮರಾಜನಗರ, ಮಂಡ್ಯ,ಹಾಸನ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ,ಜನರು ಗ್ಯಾರೆಂಟಿಗೆ ಮತ ಹಾಕುತ್ತಾರೆ ಹಾಗಾಗಿ ನಾವು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.

ಕಳೆದ ಮೂರು ದಿನಗಳಿಂದ ಮೋದಿ ಮಾಡುತ್ತಿರುವ ಭಾಷಣ ಹತಾಶೆಯಿಂದ ಮಾಡಿದಂತಿದೆ,ಅವರ ಭಾಷಣ ಒಲೈಕೆ ಅಲ್ಲ ಪ್ರಚೋದನೆಯಿಂದ ಕೂಡಿದೆ, ಅವರ ಭಾಷಣ ಆರ್ ಎಸ್ ಎಸ್ ನ ಭಾಷಣ ಎಂದು ಸಿದ್ದು ಟೀಕಿಸಿದರು.

ಅಲ್ಪ ಸಂಖ್ಯಾತರ ಸವಲತ್ತುಗಳನ್ನ ಮುಸ್ಲಿಂರಿಗೆ ಕೊಡುತ್ತಾರೆ ಎಂಬ ವಿಚಾರ ಎಲ್ಲ ಆರ್ ಎಸ್ ಎಸ್ ನ ಹಿಡನ್ ಅಜೆಂಡಾ.

ಮೋದಿ ಬಂದು ಪ್ರಚಾರ ಮಾಡಲಿ ಎಂದು ಹೇಳಿದರು.

ಇದೇ ವೇಳೆ ದೇವೇಗೌರ ಬಗ್ಗೆಯೂ ವಾಗ್ದಾಳಿ ನಡೆಸಿದ ಸಿಎಂ,ದೇವೇಗೌಡರ ಕಣ್ಣಿರು ಕೃತಕವಾದದ್ದು ಎಂದು ಟೀಕಿಸಿದರು.

ರಾಜಕಾರಣ ವಿಚಾರದಲ್ಲಿ ಕಣ್ಣೀರು ಬರಬಾರದು,ಆದರೆ ದೇವೇಗೌಡರ ಕುಟುಂಬದವರು ಯಾವಗಲೂ ಕಣ್ಣೀರು ಹಾಕುತ್ತಾರೆ,ಇದೆಲ್ಲ ಕೃತಕವಾದದ್ದು ಎಂದು ಟೀಕಿಸಿದರು.

ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ,

ಆದರೂ ಮೋದಿ ಅದೇ ರೀತಿ ಭಾಷಣ ಮುಂದುವರೆಸುತ್ತಿದ್ದಾರೆ ಎಂದು ಸಿದ್ದು ದೂರಿದರು.

ಮೊದಲ ಹಂತದ ಚುನಾವಣೆಯಲ್ಲಿ 105 ಸ್ಥಾನಗಳ ಸ್ಪರ್ಧೆಯಲ್ಲಿ ಎನ್ ಡಿಎ ಮೈತ್ರಿ ಕೂಟ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಮಾತನಾಡುವ‌ ಭರದಲ್ಲಿ ಸಿದ್ದರಾಮಯ್ಯ ಎಡವಟ್ಟು‌ ಮಾಡಿದರು,ಐ ಎನ್ ಡಿ ಐ ಎ ಎನ್ನುವ‌ ಬದಲು ಎನ್ ಡಿ ಎ ಎಂದು ಹೇಳಿದರು.

ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಕೂಡಾ ಇದೇ ರೀತಿ‌ ಎಡವಟ್ಟು ಮಾಡಿ ಸುದ್ದಿಯಾಗಿದ್ದನ್ನು ಸ್ಮರಿಸಬಹುದು.