ಸಾಂಸ್ಕೃತಿಕ ನಗರಿಗೂ ವಕ್ಕರಿಸಿದ ಓಮಿಕ್ರಾನ್

ಮೈಸೂರು:ಓಮಿಕ್ರಾನ್ ಮಾಹಾಮಾರಿ ಸಾಂಸ್ಕೃತಿಕ ನಗರಿಗೂ ವಕ್ಕರಿಸಿದೆ.

ವಿದೇಶದಿಂದ ಆಗಮಿಸಿರುವ 9 ವರ್ಷದ ಮಗುವಿಗೆ ಓಮಿಕ್ರಾನ್ ಸೋಂಕು ತಗುಲಿರುವುದರಿಂದ  ಮೈಸೂರು ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಸ್ವಿಡ್ಜರ್‍ಲ್ಯಾಂಡ್‍ನಿಂದ ಹಿಂದಿರುಗಿರುವ  9 ವರ್ಷದ ಮಗುವಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಮಗುವಿಗೆ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಓಮಿಕ್ರಾನ್ ಕಾಣಿಸಿಕೊಂಡಿರುವುದರಿಂದ ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಗುವಿನೊಂದಿಗೆ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಲಾಗುತ್ತಿದೆ.

ಮಗುವಿನ ಪೋಷಕರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.