ನಾಗರಿಕತೆ, ಸಂಸ್ಕೃತಿ ಸಂಶೋಧನೆಯ ಅನಾವರಣವೇ ಪುರಾತತ್ವ ಶಾಸ್ತ್ರ -ಡಾ. ಶೆಲ್ವಪಿಳ್ಳೆ ಅಯ್ಯಂಗಾರ್

ಮೈಸೂರು: ನಾಗರಿಕತೆ ಮತ್ತು ಸಂಸ್ಕøತಿ ಸಂಶೋಧನೆಯ ಅನಾವರಣವೇ ಪುರಾತತ್ವ ಶಾಸ್ತ್ರ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ ತಿಳಿಸಿದರು.

ಮೈಸೂರು ನಗರದ ಎಸ್ ಬಿಆರ್ ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಪುರಾತತ್ವಶಾಸ್ತ್ರ ಪರಿಚಯ ಎಂಬ ವಿಷಯ ಕುರಿತು ಮಂಗಳವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರ್ರಾಚೀನ ಇತಿಹಾಸದ ವಿವಿಧ ಕಾಲಘಟ್ಟಗಳು, ನಾಣ್ಯಶಾಸ್ತ್ರ, ಶಾಸನಶಾಸ್ತ್ರ ಹಾಗೂ ಪುರಾತತ್ವ ಅವಶೇಷಗಳ ಸಂಶೋಧನೆಯಲ್ಲಿ ತಂತ್ರಜ್ಞಾನದ ಬಳಕೆ, ವಿವಿಧ ಕಾಲ ಘಟ್ಟಗಳ ಅನ್ವೇಷಣೆ, ಪ್ರಾಗೈತಿಹಾಸಿಕ ಕಾಲದ ವಿವಿಧ ಹಂತಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಮಾನವನ ಅನಾಗರಿಕತೆಯ ಕಾಲಘಟ್ಟದಿಂದ ನಾಗರಿಕತೆಯ ಆಧುನಿಕ ಕಾಲಘಟ್ಟದವರೆಗಿನ ವಿವಿಧ ಐತಿಹಾಸಿಕ ಬದಲಾವಣೆಗಳು ಹಾಗೂ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಚ್, ಉಪನ್ಯಾಸಕರಾದ ಡಾ. ಧರ್ಮೇಶ ಎ.ಜಿ, ನಂದೀಶ ಎ.ಆರ್. ಹಾಗೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.