ಮೈಸೂರು: ಜೆ ಎಸ್ ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಹನ್ನೆರಡನೆಯ ಘಟಿಕೋತ್ಸವವು ಡಿ. 17ರಂದು ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಜರುಗಲಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಸ್ಥೆಯ ಉಪಕುಲಪತಿ ಸುರೇಂದ್ರ ಸಿಂಗ್ ಮಾತನಾಡಿ, ಘಟಿಕೋತ್ಸವವು ಜಗದ್ಗುರುಗಳು ಹಾಗೂ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮುಖ್ಯಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ.ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿ ಚಿನ್ನದ ಪದಕಗಳನ್ನು ಹಾಗೂ ಬಹುಮಾನಗಳನ್ನು ವಿತರಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಘಟಿಕೋತ್ಸವದಲ್ಲಿ ನಿಕಾಯಗಳ ಒಟ್ಟು 2138 ಪದವೀಧರರು ಪದವಿ ಮತ್ತು ಡಿಪ್ಲೋಮಗಳನ್ನು ಪಡೆಯಲಿದ್ದಾರೆ, ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು 47 ಮಂದಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಡಾಕ್ಟರ್ ಆಫ್ ಮೆಡಿಸಿನ್ ಮತ್ತು ಎಂ ಸಿ ಎಚ್ ಪದವಿಯನ್ನು 7 ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ, 61 ಶೈಕ್ಷಣಿಕ ಟಾಪರ್ ಗಳು ಅಪ್ರತಿಮ ಶೈಕ್ಷಣಿಕ ಸಾಧನೆಗಾಗಿ 83 ಪದಕಗಳನ್ನು ಹಾಗೂ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ ಎಂದು ಸಿರೇಂದ್ರಸಿಂಗ್ ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ರವೀಂದ್ರ,ಮಂಜುನಾಥ್, ಕುಶಾಲಪ್ಪ, ಡಾ.ಸುಮಾ, ಡಾ. ರವೀಶ್ , ಪ್ರಶಾಂತ್, ಡಾ. ಮಮತಾ, ದಾಕ್ಷಾಯಿಣಿ ಮತ್ತಿತರರು ಉಪಸ್ಥಿತರಿದ್ದರು.

