ಮಂಜು ಮುಸುಕಿದ ಸಾಂಸ್ಕೃತಿಕ ನಗರಿ

ಮೈಸೂರು. ಸಾಂಸ್ಕೃತಿಕ ನಗರಿ ಮೈಸೂರು ಮಡಿಕೇರಿ ಮಾದರಿಯಲ್ಲಿ ಕಾಣಿಸಿತ್ತಿತ್ತು.

ಬೆಳಗ್ಗೆ ಸುಮಾರು 11 ಗಂಟೆವರೆಗೂ ಮಂಜು ಮುಸುಕಿದ್ದರಿಂದ ಮಡಿಕೇರಿ ಮಾದರಿ‌ವಾತಾವರಣ ಕಾಣಿಸುತ್ತಿತ್ತು.

ಚಾಮುಂಡಿ ಬೆಟ್ಟ ಸೇರಿದಂತೆ ಇಡೀ ನಗರ ಮಂಜಿನ ಹಾಸಿಗೆಯನ್ನೇ ಹೊದ್ದುಕೊಂಡಂತಿತ್ತು.

ಆದರೆ ಬೆಟ್ಟಕ್ಕೆ ಚಾರಣ ಹೋಗುವವರು ತೊಂದರೆ ಅನುಭವಿಸಬೇಕಾಯಿತು. ಏಕೆಂದರೆ ರಸ್ತೆಯೇ ಕಾಣುತ್ತಿರಲಿಲ್ಲ.

ಇನ್ನು ವಾಹನಗಳಲ್ಲಿ ತೆರಳಿದ್ದವರಲ್ಲಿ ಗಾಡಿ ಓಡಿಸಲಾಗದೆ ಕೆಲವರು ಹಾಗೆ ವಾಪಸಾದರು.

ಡಿಸೆಂಬರ್ 25 ಶನಿವಾರ ಕ್ರಿಸ್ಮಸ್,ಜತೆಗೆ ನಾಳೆ ಭಾನುವಾರ ಆಗಿರುವುದರಿಂದ ಎರಡುದಿನ ರಜೆ.ಹಾಗಾಗಿ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ.

ಚಾಮುಂಡಿಬೆಟ್ಟಕ್ಕೆ ತಂಡೋಪ ತಂಡವಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮಂಜುಮುಸುಕಿದ ಚುಮುಚುಮು ಚಳಿಯಲ್ಲಿ ಸರತಿ ಸಾಲಿನಲ್ಲಿ ನಿಂತು ಚಾಂಮುಂಡೇಶ್ವರಿ ತಾಯಿಯ ದರ್ಶನ ಪಡೆದರು.

ಬೆಟ್ಟದ ಮೇಲಿನಿಂದ ಸಾಂಸ್ಕೃತಿಕ ನಗರಿಯನ್ನು ವೀಕ್ಷಿಸುವುದೇ ಒಂದು ಆನಂದ. ಶನಿವಾರದ ಬೆಳಗಿನ ವಾತಾವರಣದಲ್ಲಿ  ನಗರವನ್ನು ನೋಡಿದಾಗ ಮಂಜಿನ ಮೋಡದ ಹಾಸಿಗೆ ಕೆಳಗೆ ಹೊದ್ದು ಮಲಗಿದಂತೆ ಭಾಸವಾಗುತ್ತಿತ್ತು.

ಮಡಿಕೇರಿಯಲ್ಲಿ ಈ ಸಮಯದಲ್ಲಿರುವ  ವಾತಾವರಣವನ್ನು ಅನುಭವಿಸಲು ಪ್ರವಾಸಿಗರು ಅಲ್ಲಿಗೆ ತೆರಳುತ್ತಾರೆ. ಅದೇ ಮಾದರಿ ಮೈಸೂರಿನಲ್ಲಿ ಕಂಡು ಬಂದುದು ವಿಶೇಷವಾಗಿತ್ತು.