ಚಂಡಮಾರುತ: ವಾಷಿಂಗ್ ಟನ್ ನಲ್ಲಿ ವಿಮಾನ ಸೇವೆ ಬಂದ್

ಅಮೆರಿಕ:ಅಟ್ಲಾಂಟಿಕ್ ಕಡಲ ಚಂಡಮಾರುತ ಅಮೆರಿಕ ಪೂರ್ವ ಕರಾವಳಿಗೆ ಅಪ್ಪಳಿಸಿದ ಪರಿಣಾಮ ವಾಷಿಂ‌ಗ್ ಟನ್ ನಲ್ಲಿ ವಿಮಾನ ಸೇವೆ ಬಂದ್ ಆಗಿದೆ.

ಚಂಡಮಾರುತದ ಜೊತೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ  ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ರಜಾದಿನದ ಮೋಜಿಗಾಗಿ ತೆರಳಿದ್ದವರು ವಾಪಸು ಮನೆಗೆ ಹೋಗಲು ಪರದಾಡುವಂತಾಗಿದೆ.

ಸುಮಾರು 3000 ದೇಶೀಯ ವಿಮಾನ ಮತ್ತು ಸುಮಾರು 4700 ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ದೇಶೀಯ 5,600 ಸೇರಿದಂತೆ ಸುಮಾರು 12,500 ವಿಮಾನಗಳು ವಿಳಂಬವಾಗಿವೆ.

ಕೆಲವರು ವಿಮಾನ ನಿಲ್ದಾಣಗಳಲ್ಲೇ ಮಲಗಿದ್ದಾರೆ.

ಕೊಲಂಬಿಯಾ, ಉತ್ತರ ವರ್ಜೀನಿಯಾ ಮತ್ತು ಮಧ್ಯ ಮೇರಿಲ್ಯಾಂಡ್‍ನಲ್ಲಿ ಜನರು ಹಿಮ ಗಾಳಿಯ ಚಂಡಮಾರುತದೊಂದಿಗೆ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.