ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ವಾರಾಂತ್ಯ ಕರ್ಫ್ಯೂ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಸಚಿವರು ಹಾಗೂ ತಜ್ಞರೊಂದಿಗೆ ಸಬೆ ನಡೆಸೆ ಸುದೀರ್ಘ ಚರ್ಚೆ ನಡೆಸಿದರು.
ತಜ್ಞರ ಸಲಹೆ ಮೇರೆಗೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿದೆ ಎಂದು ಸಭೆಯ ನಂತರ ಸಚಿವ ಆರ್. ಅಶೋಕ್ ಮಾಧ್ಯಮ ಪ್ರತಿ ನಿಧಿಗಳಿಗೆ ತಿಳಿಸಿದರು.
ಬೇರೆ ದಿನಗಳಲ್ಲಿ ಕರ್ಫ್ಯೂ ಮುಂದುವರಿಯಲಿದೆ. ಆದರೆ ಶನಿವಾರ ಭಾನುವಾರ ಲಾಕ್ ಡೌನ್ ಮಾದರಿ ಇರುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪ್ರತ್ಯೆಕ ರೂಲ್ಸ್ ಹಾಗೂ ಜಿಲ್ಲೆಗಳಲ್ಲಿ ಪ್ರತ್ಯೇಕ ರೂಲ್ಸ್ ಇರಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಒಂದರಿಂದ ಹತ್ತನೆ ತರಗತಿಗಳನ್ನು ಸಧ್ಯಕ್ಕೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಪಿಯು ತರಗತಿಗಳು ಆಫ್ ಲೈನ್ ನಲ್ಲಿ ನಡೆಯಲಿವೆ, ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಕೇವಲ ಇನ್ನೂರು ಮಂದಿಗೆ ಅವಕಾಶವಿದೆ ಎಂದರು.
ಅಲ್ಲದೆ ಹೋಟೆಲ್ ಮತ್ತಿತರೆಡೆ ಶೇ.50 ರಷ್ಟು ಮಾತ್ರ ಅವಕಾಶವಿದೆ ಜನರು ಕೊರೊನ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕೆಂದು ಸಚಿವರು ಮನವಿ ಮಾಡಿದರು.
ರಾಜ್ಯದ ಗಡಿಭಾಗಗಳಲ್ಲಿ ಹೆಚ್ಚಿನ ಬಿಗಿ ಕ್ರಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕದೆ ಒಂದಿಷ್ಟು ಕಠಿಣ ನಿಯಮಗಳನ್ನು ರೂಪಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ಪಾಸಿವಿಟಿ ದರ ಶೇ.2ಕ್ಕಿಂತಲೂ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ.
ಪಾಸಿವಿಟಿ ದರ ಶೇ.5ರಷ್ಟು ಹಾಗೂ ಐಸಿಯು ಬೆಡ್‍ಗಳಲ್ಲಿ ಶೇ.40ರಷ್ಟು ದಾಖಲಾದರೆ ಸರ್ಕಾರ ತಕ್ಷಣವೇ ಹಿಂದುಮುಂದು ನೋಡದೆ ಲಾಕ್‍ಡೌನ್ ಮಾಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

