ಶಾಸಕರು-ಸಚಿವರುಗಳಿಗೂ ವಕ್ಕರಿಸಿದ ಕೊರೋನಾ

ಮುಂಬೈ : ಜಗತ್ತಿನಾದ್ಯಂತ ಕೊರೋನಾ ಮತ್ತೆ ದಾಂಗುಡಿ ಇಟ್ಟು ತಲ್ಲಣ ಸೃಷ್ಟಿಸಿದೆ.

ನಮ್ಮ ದೇಶದಲ್ಲಿಯೂ ಮತ್ತೊಮ್ಮೆ ಕೋವಿಡ್-19 ಪ್ರಕರಣಗಳು ವೇಗವಾಗಿ ಹರಡುತ್ತಿದ್ದು ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಈ ರೋಗ ಅತಿ ಹೆಚ್ಚು ಕಾಡುತ್ತಿದೆ.

ಇಲ್ಲಿ ಜನಸಾಮಾನ್ಯರಷ್ಟೇ ಅಲ್ಲ, ಸ್ಟಾರ್ ನಟರುಗಳಿಂದ ಹಿಡಿದು ರಾಜಕೀಯ ನಾಯಕರನ್ನೂ ಕೊರೊನಾ ಕಾಡುತ್ತಿದೆ.

ಮಹಾರಾಷ್ಟ್ರದಲ್ಲಿ ಪ್ರಸ್ತುತ 24 ರಾಜಕೀಯ ನಾಯಕರಿಗೆ ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದೆ.

ಸಚಿವರುಗಳಾದ ಕೆ.ಸಿ. ಪಾಡವಿ, ವರ್ಷಾ ಗಾಯಕವಾಡ್ , ಬಾಳಾಸಾಹೇಬ್ ಥೋರಟ್,ಯಶೋಮತಿ ಠಾಕೂರ್, ಪ್ರಜಕ್ತ್ ತನ್ಪುರೆ,ಏಕನಾಥ್ ಶಿಂಧೆ , ಶಾಸಕರುಗಳಾದ ಸಾಗರ್ ಮೇಘೆ ,ಧೀರಜ್ ದೇಶಮುಖ್ ,ರಾಧಾಕೃಷ್ಣವಿಖೆ ಪಾಟೀಲ್, ದೀಪಕ್ ಸಾವಂತ್ ,ಮಾಧುರಿ ಮಿಶಾಲ್, ಚಂದ್ರಕಾಂತ ಪಾಟೀಲ,ಇಂದ್ರನೀಲ್ ನಾಯಕ್, ವಿದ್ಯಾ ಠಾಕೂರ್,ಅತುಲ್ ಭಟ್ಕಳಕರ್,ನಿಲಯ್ ನಾಯಕ್ ಅವರಿಗೂ ಕೊರೊನ ಸೋಂಕು ಬಾಧಿಸಿದೆ.

ಅಲ್ಲದೆ ಸಂಸದರಾದ ಸುಪ್ರಿಯಾ ಸುಳೆ,ಅರವಿಂದ್ ಸಾವಂತ್ ,ಮಾಜಿ ಸಚಿವರಾದ ಹರ್ಷವರ್ಧನ್ ಪಾಟೀಲ್,ಥಾಣೆ ಮಹಾನಗರ ಪಾಲಿಕೆ ಆಯುಕ್ತ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ, ಯುವ ಸೇನೆಯ ಪ್ರಧಾನ ಕಾರ್ಯದರ್ಶಿ  ವರುಣ್ ಸರ್ದೇಸಾಯಿ ಅವರುಗಳಿಗೂ ಕೊರೋನಾ ಸೋಂಕು ತಗುಲಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.