ಡಿ.ಕೆ.ಬ್ರದರ್ಸ್ ವಿರುದ್ದ ಮತ್ತೆ ಕಿಡಿ ಕಾರಿದ ಡಾ.ಅಶ್ವಥ್ ನಾರಾಯಣ್

ಬೆಳಗಾವಿ:ರಾಮನಗರದಲ್ಲಿ ಕೆಲವರು ಮನ ಬಂದಂತೆ ನಡೆದುಕೊಂಡು ಬಂದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.‌ಅಶ್ವಥ್ ನಾರಾಯಣ್ ಮತ್ತೆ ಡಿ.ಕೆ.ಬ್ರದರ್ಸ್ ವಿರುದ್ದ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು ಏನೇ ಮಾಡಿದರೂ ನಾವು ಜಯಸಿಕೊಳ್ಳುತ್ತೇವೆ ಅನ್ನೋ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಪಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಡಿ.ಕೆ. ಬ್ರದರ್ಸ್ ಕೇವಲ ತಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆಧ್ಯತೆ ಕೊಟ್ಟು  ಬಾಳುತ್ತಿದ್ದವರು. ಇದು ಸಾಕಾಗಿದೆ, ನಿಮಗೆ ಸಾಧನೆ ಎನಾದರೂ ಇದ್ದರೆ ಕೆಲಸದಲ್ಲಿ ತೋರಿಸಬೇಕು ಎಂದು ಸವಾಲು ಹಾಕಿದರು.

ಆ ಭಾಗದ ಜನರ ಧ್ವನಿಯಾಗಿ ಈಗಾಗಲೇ ನಾವು ಕೆಲಸ ಮಾಡುತ್ತಿದ್ದೇವೆ ನೀವೆನೂ ಮಾಡಿದ್ದೀರಿ ಹೇಳಿರಪ್ಪಾ. ಇಲ್ಲಿ ಬಂದು ಗಲಾಟೆ ಮಾಡುವುದಲ್ಲ ಪುಂಡಾಟಿಕೆ ಮಾಡುವುದಿಲ್ಲ ಅಂತಾ ಕೇಳಿದೆವು. ಇದನ್ನ ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ತಿರುಗೇಟು ನೀಡಿದರು.

ಮೇಕೆದಾಟು ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಯಿಸಿದ ಸಚಿವರು, ಏನೇನು ನಿರ್ಬಂಧ ಇದೆ ನೋಡೋ‌ಣ,ಒಟ್ಟಾರೆಯಾಗಿ ಇಡೀ ಸಮಾಜಕ್ಕೆ ಇದು ಅನ್ವಯವಾಗುತ್ತದೆ.

ಇದನ್ನ ಉಲ್ಲಂಘನೆ ಮಾಡುತ್ತೇವೆ ಅಂದರೆ ಸರ್ಕಾರ ಎನು ಕ್ರಮ ತೆಗೆದುಕೊಳ್ಳಬೇಕೊ ಅದನ್ನ ತೆಗೆದುಕೊಳ್ಳಲಿದೆ ಎಂದರು.

ಈಗ ಒಂಬತ್ತೇ ತರಗತಿ ವರೆಗೆ ಶಾಲೆಗಳ ಬಂದ್ ಮಾಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಏನೇನು ಕ್ರಮ ವಹಿಸಬೇಕು ಅದನ್ನ ವಹಿಸುತ್ತೇವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಬೆಂಗಳೂರಿನಲ್ಲಿ  ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ಓಮಿಕ್ರಾನ್ ವೇಗವಾಗಿ ಹರಡುವ ವೈರಸ್ ಆಗಿದೆ.ಲಾಕ್ ಡೌನ್ ಮಾಡಬಾರದು ಎಂಬುದು ನಮ್ಮ ಮೂಲ ಉದ್ದೇಶ. ಪೂರ್ವಭಾವಿಯಾಗಿ ಸಣ್ಣ ಸಣ್ಣ ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.