ಸಿದ್ದರಾಮಯ್ಯ ಸಹ ರಾಜ್ಯದ ಆಸ್ತಿ: ಸಿದ್ದು ಬಗ್ಗೆ ಸಾಫ್ಟ್ ಕಾರ್ನರ್ ಆದ ಈಶ್ವರಪ್ಪ

ಚಿತ್ರದುರ್ಗ: ಇದುವರೆಗೆ ಹೋದಲೆಲ್ಲಾ ಸಿದ್ದರಾಮಯ್ಯ ಅವರನ್ನು ತೆಗಳುತ್ತಿದ್ದ ಸಚಿವ ಈಶ್ವರಪ್ಪ ಅದೇನೊ ಇದ್ದಕ್ಕಿದ್ದಂತೆ ಸಾಫ್ಟ್ ಆಗಿಬಿಟ್ಟಿದ್ದಾರೆ.

ಮೇಕೆದಾಟು ಪಾದಯಾತ್ರೆ ಮಾಡಲಿ ಬೇಡ ಅನ್ನುವುದಿಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳಬಾರದು, ಬಿ.ಎಸ್.ಯಡಿಯೂರಪ್ಪ ಹಾಗೂ ದೇವೇಗೌಡರಂತೆ ಸಿದ್ದರಾಮಯ್ಯ ಸಹ ರಾಜ್ಯದ ಆಸ್ತಿ, ಕೋವಿಡ್ ನಿಂದ ಏನಾದರು ಹೆಚ್ಚು ಕಡಿಮೆ ಆದರೆ ಯಾರೂ ಹೊಣೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಗುರುವಾರ ಚಿತ್ರದುರ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಬಗ್ಗೆ ಬಹಳ ಮುತುವರ್ಜಿಯಿಂದ ಮಾತನಾಡಿದ ಅವರು, ಮಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ಅನುಭವಿಸಿದ್ದವರಲ್ಲಿ ನಾನು, ಸಿದ್ದರಾಮಯ್ಯ ಕೂಡಾ ಸೇರಿದ್ದೇವೆ ಎಂದು ಹೇಳಿದರು.

ಮೇಕೆದಾಟು ಪಾದಯಾತ್ರೆ ಮಾಡಲಿ ಬೇಡ ಅನ್ನುವುದಿಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳಬಾರದು. ಯಡಿಯೂರಪ್ಪ, ದೇವೇಗೌಡರ ರೀತಿಯಲ್ಲಿ ಸಿದ್ದರಾಮಯ್ಯ ಕೂಡಾ ಈ ರಾಜ್ಯದ ಆಸ್ತಿ. ನಾಳೆ ಕೋವಿಡ್ ನಿಂದ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್  ಸೋಂಕಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಗೊತ್ತಿಲ್ಲ. ಮೇಕೆದಾಟು ಯೋಜನೆಗೆ ಹೋರಾಟ ಮಾಡುವುದಾದರೆ ಕೋವಿಡ್ ಮುಗಿದ ಬಳಿಕ ನಾವೇ ವ್ಯವಸ್ಥೆ ಮಾಡುತ್ತೇವೆ, ಪಾದಯಾತ್ರೆ ಮಾಡಲಿ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.