ವಾರಾಂತ್ಯದಲ್ಲಿ ರೈಲ್ವೆ ಮ್ಯೂಸಿಯಂ ಬಂದ್

ಮೈಸೂರು:ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಸರ್ಕಾರದ ಮಾರ್ಗಸೂಚಿ ಪ್ರಕಾರ ಮೈಸೂರಿನ ರೈಲು ವಸ್ತು ಸಂಗ್ರಹಾಲ ಯವನ್ನು ವಾರಾಂತ್ಯದಲ್ಲಿ (ಜ.8, 9, 15 ಮತ್ತು 16) ಮುಚ್ಚಲಾಗುವುದು ಎಂದು  ಮೈಸೂರು ವಿಭಾಗದ ನೈಋತ್ಯ ರೈಲ್ವೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ತಿಳಿಸಿದ್ದಾರೆ.

ಜ.11 ಮತ್ತು 18ರಂದು ಮಂಗಳವಾರ ರಜಾ ದಿನಗಳು ಸೇರಿದಂತೆ ಸೋಮವಾರದಿಂದ ಶುಕ್ರವಾರದವರೆಗೆ ರೈಲು ಮ್ಯೂಸಿಯಂ ಸಾರ್ವಜನಿಕರಿಗೆ ತೆರೆದಿರುತ್ತದೆ.

ಮ್ಯೂಸಿಯಂ ಆವರಣದಲ್ಲಿ ಎಲ್ಲಾ ಕೋವಿಡ್ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಿ, ಸಹಕರಿಸುವಂತೆ ಮ್ಯೂಸಿಯಂಗೆ ಭೇಟಿ ನೀಡುವವರಲ್ಲಿ  ರಾಹುಲ್ ಅಗರ್ವಾಲ್ ಮನವಿ ಮಾಡಿದ್ದಾರೆ.

ರೈಲ್ವೆ ಆವರಣದಲ್ಲಿ ಫೇಸ್ ಮಾಸ್ಕ್ ಇಲ್ಲದೇ ಅಥವಾ ತಪ್ಪಾಗಿ ಧರಿಸಿದರೆ 500ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.